ರಾಹುಲ್ ಗಾಂಧಿಯಿಂದ ‘ಹಲೋ ಡಾಕ್ಟರ್’ ಕೊರೊನ ಹೆಲ್ಪ್ ಲೈನ್ ಗೆ ಚಾಲನೆ

0
551

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೋನಾ ರೋಗಿಗಳಿಗಾಗಿ ವೈದ್ಯಕೀಯ ಸಲಹೆ ಹೆಲ್ಪ್ ಲೈನ್ ಅನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರಂಭಿಸಿದ್ದು ಇದನ್ನು ಅವರು ಟ್ವಿಟ್ಟರ್ ಮೂಲಕ ತಿಳಿಸಿದರು. ಕೊರೋನಾ ಅತ್ಯಂತ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಕೆಲಸಕ್ಕೆ ಮುಂದಾಗಿದ್ದಾರೆ.

ಭಾರತ ಒಟ್ಟು ಸೇರಿ ತಮ್ಮ ಸ್ವಜನತೆಗೆ ಸಹಾಯ ನೀಡಬೇಕಾದ ಸಮಯವಿದು. ಅದಕ್ಕಾಗಿ ‘ಹಲೋ ಡಾಕ್ಟರ್ ಮೆಡಿಕಲ್ ಅಡ್ವೈಸರಿ ಹೆಲ್ಪ್ ಲೈನ್’ ಆರಂಭಿಸಿದ್ದೆಂದು ಮತ್ತು ಸಹಾಯ ಅಗತ್ಯ ಇರುವವರು +91 9983836838 ನಂಬ್ರಕ್ಕೆ ಕರೆ ಮಾಡಬೇಕೆಂದು ತಿಳಿಸಿದರು.

ವೈದ್ಯರೊಂದಿಗೆ ಎಐಸಿಸಿಯ ಹಲೋ ಡಾಕ್ಟರ್ ನೊಂದಿಗೆ ಸೇರಿಕೊಳ್ಳಲು ಮನವಿ ಮಾಡಲಾಗಿದೆ. ಕೊರೊನ ರೋಗಿಗಳು ಕರೆ ನೀಡುವಾಗ ಡಾಕ್ಟರ್ ಗಳಿಗೆ ಬೆಲೆಬಾಳುವ ಮಾಹಿತಿಯನ್ನು ನೀಡಲು ಸಾಧ್ಯವಿದೆ. ಅಸಮಾನವಾದ ಆರೋಗ್ಯ ಬಿಕ್ಕಟ್ಟು ಇದು. ಪರಸ್ಪರ ಬೆಂಬಲಿಸುವ ಮೂಲಕ ಅಶಾವಾದ ಮೂಡಿಸಬೇಕಾಗಿದೆ. ನೀವು ಒಬ್ಬ ವೈದ್ಯರಾದರೆ ನೀವು ಹಲೋ ಡಾಕ್ಟರ್‍ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದೆ ಎಂದು ರಾಹುಲ್ ಗಾಂಧಿ ವೈದ್ಯರುಗಳೊಂದಿಗೆ ಮನವಿ ಮಾಡಿದ್ದಾರೆ.