160 ಸೀಟಿನ ವಿಮಾನದಲ್ಲಿ ಓರ್ವನನ್ನೇ 4000 ಕಿ.ಮೀ ಕರೆದುಕೊಂಡು ಹೋದ ಬೊಯಿಂಗ್ ವಿಮಾನ: ಕಾರಣವೇನು ಗೊತ್ತಾ?

0
708

ಸನ್ಮಾರ್ಗ ವಾರ್ತೆ

ಇಸ್ರೇಲ್: 160 ಸೀಟಿನ ವಿಮಾನದಲ್ಲಿ ಓರ್ವ ಪ್ರಯಾಣಿಕನನ್ನು ಮಾತ್ರ ಸುಮಾರು 4000 ಕಿ.ಮೀ ಕರೆದುಕೊಂಡು ಹೋದ ಘಟನೆ ಟೆಲ್‍ ಅವಿವ್‍ನಿಂದ ವರದಿಯಾಗಿದೆ.

ರೋಗಿಯಾದ ಒಬ್ಬ ಪ್ರಯಾಣಿಕನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಿಕ್ಕಾಗಿ 4000 ಕಿಲೋ ಮೀಟರ್ ದೂರವನ್ನು ಬೊಯಿಂಗ್ 737 ಜೆಟ್ ವಿಮಾನ ಕ್ರಮಿಸಿದೆ. ಟೆಲ್‍ಅವಿವ್‍ನಿಂದ ಕಾಸಬ್ಲಾಂಕಾಕ್ಕೆ. ಈ ದೂರವನ್ನು ತಲುಪಲು ಒಂದು ರಾತ್ರಿ ಹಗಲು ತೆಗೆದುಕೊಂಡಿರುವುದಾಗಿ ವರದಿಯಾಗಿದೆ. ಇಸ್ರೇಲ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎಲ್ ಅಲ್ ಟೆಲ್ ಅವೀವ್‌ನಿಂದ ಕಾಸಾಬ್ಲಾಂಕಾಕ್ಕೆ ಬೋಯಿಂಗ್ 737 ಜೆಟ್ ಅನ್ನು ಹಾರಿಸಿದೆ.

160 ಸೀಟಿನ ವಿಮಾನದಲ್ಲಿ ಒಬ್ಬನೇ ಸಂಚರಿಸಿದ್ದು ಇಸ್ರೇಲಿನ ಬಿಸಿನೆಸ್ ಮೆನ್ ಎಂದು ಮಾಧ್ಯಮಗಳು ವರದಿ ಮಾಡಿದೆ. ವಿಮಾನಗಳನ್ನು ಟ್ರ್ಯಾಕ್ ಮಾಡುವ ವೆಬ್‍ಸೈಟ್ ನೀಡುವ ವಿವರಗಳ ಆಧಾರದಲ್ಲಿ ಎಲ್.ವೈ 5051 ವಿಮಾನ ಟೆಲ್ ಅವಿವ್‍ನ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2:20ಕ್ಕೆ ಹೊರಟು ಮರುದಿನ ಸಂಜೆ 5. 22ಕ್ಕೆ ಕಾಸ ಬ್ಲಾಂಕ ಸೇರಿಕೊಂಡಿತೆಂದು ವರದಿಯಾಗಿದೆ.

ಮೊರಾಕ್ಕೋದಲ್ಲಿ ವಾಸವಿದ್ದ ಈ ಉದ್ಯಮಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದರಿಂದ ಇಷ್ಟು ದೂರ ಪ್ರಯಾಣಿಸಿದ್ದರೆಂದು ಮಾಧ್ಯಮಗಳು ತಿಳಿಸಿವೆ. ಇದೇ ವೇಳೆ ಹಣಕೊಟ್ಟು ಸೇವೆ ಕೊಡುವ ರೀತಿ ಇದಾಗಿದೆ ಎಂದು ವಿಮಾನಯಾನ ಕಂಪೆನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.