ಬೆಂಗಳೂರು: ಜಮಾಅತೆ ಇಸ್ಲಾಮಿ ಹಿಂದ್ ಸಾರಾಯಿಪಾಳ್ಯ ಸಂಚಾಲಕ ರಫೀ ಅಹ್ಮದ್ ನಿಧನ

0
1334

ಸನ್ಮಾರ್ಗ ವಾರ್ತೆ

ಬೆಂಗಳೂರು: ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಮತ್ತು ಜಮಾಅತೆ -ಇಸ್ಲಾಮಿ ಹಿಂದ್ ಬೆಂಗಳೂರಿನ ಸಾರಾಯಿಪಾಳ್ಯದ ಸಂಚಾಲಕರಾಗಿದ್ದ ಜನಾಬ್ ರಫೀ ಅಹ್ಮದ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಮೂಲತಃ ಹೊಸಪೇಟೆಯವರಾದ ಇವರು ಬೆಂಗಳೂರಿನಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ದುಡಿಯುತ್ತಿದ್ದರು. ತಮ್ಮ ಸೌಮ್ಯ ಸ್ವಭಾವ ಮತ್ತು ಎಲ್ಲರೊಂದಿಗೂ ಬೆರೆಯುವ ಗುಣದಿಂದಾಗಿ ಜನಾನುರಾಗಿಯಾಗಿದ್ದರು. ಅಲ್ಲದೆ ಜಮಾಅತೆ ಇಸ್ಲಾಮಿ ಹಿಂದ್ ನ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಇವರ ಪತ್ನಿ ಸ್ಥಾನೀಯ ಜಮಾಅತ್ ನ ಮಹಿಳಾ ಘಟಕದ ಸಂಚಾಲಕರಾಗಿದ್ದಾರೆ. ಇವರು ಓರ್ವ ಮಗಳು, ಇಬ್ಬರು ಗಂಡು ಮಕ್ಕಳು ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಬೆಳಗಾಮಿ ಮಹಮ್ಮದ್ ಸಾದ್ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರ ಅಗಲಿಕೆಯ ದುಃಖವನ್ನು ಸಹಿಸಲು ಅವರ ಕುಟುಂಬಕ್ಕೆ ಅಲ್ಲಾಹನು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಅಲ್ಲಾಹನು ಮೃತರಿಗೆ ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ.