ಸನ್ಮಾರ್ಗ ವಾರ್ತೆ
ಚೆನ್ನೈ: ಕೊರೋನ ವ್ಯಾಕ್ಸಿನ್ ಬಗ್ಗೆ ವಿವಾದ ಹುಟ್ಟುಹಾಕಿದ್ದ ತಮಿಳು ನಟ ಮನ್ಸೂರ್ ಅಲಿಖಾನ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಡ್ನಿ ಸ್ಟೋನ್ ತೊಂದರೆಯ ಕಾರಣದಿಂದ ಅವರನ್ನು ಐಸಿಯುನಲ್ಲಿ ಇರಿಸಲಾಗಿದೆ. ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಹಿಂದೆ ಕೊರೋನ ವ್ಯಾಕ್ಸಿನ್ ಕುರಿತು ಮನ್ಸೂರ್ ಅಲಿಖಾನ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಕೊರೋನ ವ್ಯಾಕ್ಸಿನ್ ತೆಗೆದುಕೊಂಡಿದ್ದರಿಂದ ನಟ ವಿವೇಕ್ ಮೃತಪಟ್ಟಿದ್ದರು ಎಂದು ಖಾನ್ ಹೇಳಿದ್ದರು. ಈ ಘಟನೆಯಲ್ಲಿ ಮನ್ಸೂರ್ ವಿರುದ್ಧ ಕೇಸು ದಾಖಲಾಗಿದೆ.












