ಸನ್ಮಾರ್ಗ ವಾರ್ತೆ
ರಾಯ್ಪುರ: ಸೋಮವಾರ ಛತ್ತೀಸ್ಗಡದ ಸಿಆರ್ಪಿಎಫ್ ಶಿಬಿರದ ವಿರುದ್ಧ ಪ್ರತಿಭಟನೆ ನಡೆಸಿದ ಆದಿವಾಸಿಗಳ ಮೇಲೆ ಪೊಲೀಸರು ಗೋಲಿಬಾರ್ ಮಾಡಿದ್ದು ಮೂರು ಮಂದಿ ಸಾವೀಗೀಡಾಗಿದ್ದಾರೆ. ತದನಂತರ ಪ್ರತಿಭಟನೆ ಗರಿಗೆದರಿ ತೀವ್ರಗೊಂಡಿದೆ. ಸುಕ್ಮ ಜಿಲ್ಲೆಯ ಸಿಲ್ಗರ ಗ್ರಾಮದ ಸಮೀಪದಲ್ಲಿ ಹೊಸದಾಗಿ ಆರಂಭವಾದ ಸಿಆರ್ಪಿಎಫ್ ಸುರಕ್ಷಾ ಕ್ಯಾಂಪ್ನಿಂದ ಹೊರಬರುವ ರಸ್ತೆಯಲ್ಲಿ ಸೋಮವಾರ ಪೊಲೀಸ್ ಗೋಲಿಬಾರು ನಡೆದಿತ್ತು. ನಾಲ್ಕು ದಿವಸಗಳಿಂದ ಸುಕ್ಮ, ಬಿಜಾಪುರಗಳ 30 ಗ್ರಾಮಗಳಿಂದ ಆದಿವಾಸಿ ಬುಡಕಟ್ಟು ಜನರು ಕ್ಯಾಂಪಿನ ಹೊರಗೆ ಪ್ರತಿಭಟಿಸುತ್ತಿದ್ದರು.
‘ನಾವು ನಾಲ್ಕು ದಿನಗಳಿಂದ ಇಲ್ಲಿ ಪ್ರತಿಭಟಿಸುತ್ತಿದ್ದೆವು. ನಮ್ಮಲ್ಲಿರುವ ರೇಶನ್ ಮುಗಿಯಿತು. ಆದ್ದರಿಂದ ಶಿಬಿರದ ವಿರುದ್ಧ ಒಂದು ಮೆಮರಾಡಂ ನೀಡಬೇಕೆಂದು ಬಯಸಿದೆವು. ಅವರು ಇನ್ನೂ ಶಿಬಿರ ವಿಷಯದಿಂದ ಹಿಂದೆ ಸರಿಯದಿದ್ದರೆ ಕೆಲವು ದಿವಸಗಳ ನಂತರ ನಾವು ಮರಳಿ ಬರಲು ತೀರ್ಮಾನಿಸಿದ್ದೇವೆ’ ಎಂದು ಪ್ರತಿಭಟನಾಕಾರರಲ್ಲಿ ಒಬ್ಬರು 65 ವರ್ಷ ವಯಸ್ಸಿನ ಕೊರರ್ಸು ಸೊಮರು ಹೇಳಿದರು. ಆದರೆ ಪೊಲೀಸರು ನಮ್ಮಲ್ಲಿನ ಮೂವರ ಜೀವ ತೆಗೆದಿದ್ದರಿಂದ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ. ಇದು ನಮ್ಮ ತೀರ್ಮಾನ ಎಂದು ಅವರು ತಿಳಿಸಿದರು.
ಪ್ರತಿಭಟನೆ ಇಲ್ಲದಂತೆ ಮಾಡಲು ಸುರಕ್ಷಾ ಸೇನೆ ಗುಂಡು ಹಾರಿಸಿದ್ದೆಂದು ಆದಿವಾಸಿಗಳು ಹೇಳಿದರೆ, ಪ್ರತಿಭಟನಕಾರರ ನಡುವೆ ನಕ್ಸಲರು ಸಿಲ್ಗರ್ ಶಿಬಿರವನ್ನು ಆಕ್ರಮಿಸುತ್ತಿದ್ದರೆಂದು ಪೊಲೀಸರು ಹೇಳುತ್ತಿದ್ದಾರೆ. ನಮ್ಮ ಜನರು ಗುಂಡು ಹಾರಿಸಿ ಸ್ಥಿತಿಗತಿಯನ್ನು ಶಾಂತಗೊಳಿಸಿದರು ಎಂದು ಬಸ್ತರ್ ಐಜಿಪಿ ಸುಂದರ್ ರಾಜ್ ಹೇಳಿದರು.
ಸಿಲ್ಗರ್, ಜಗರ್ಗುಂಡ ನಡುವೆ ಸಿಆರ್ಪಿಎಫ್ ಔಟ್ ಪೋಸ್ಟ್ ಕೆಲಸ ತೊಡಗಿ ವರ್ಷಗಳೇ ಆಗಿವೆ. ಆದರೆ ಕಳೆದ ಮೇ 12ಕ್ಕೆ ಇದು ಶುರುವಾಗಿದೆ. ಇದರ ಸಮೀಪದ 30 ಗ್ರಾಮಗಳಲ್ಲಿ ಬುಡಕಟ್ಟು ಜನರಿದ್ದು ಪ್ರತಿಭಟನೆ ಮಾಡುತ್ತಿದ್ದಾರೆ. ಗ್ರಾಮಸ್ಥರನ್ನು ನಕ್ಸಲರು ಪ್ರಚೋದಿಸಿ ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು. ನಮ್ಮ ಜಮೀನು ಕಿತ್ತುಕೊಂಡು ಇಲ್ಲಿ ಕ್ಯಾಂಪ್ ಮಾಡಿದ್ದಾರೆ ಎಂದು ಸಿಲ್ಗರ್ ಗ್ರಾಮೀಣರು ಮೊದಲು ಪ್ರತಿಭಟನೆ ಶುರುಮಾಡಿದರು. ನಂತರ ನೆರೆಯ ಗ್ರಾಮಗಳ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಒಂದು ಆಸ್ಪತ್ರೆಗಾಗಲಿ, ಒಂದು ಶಾಲೆಗಾಗಲಿ ನಾವು ಜಮೀನು ದಾನವಾಗಿ ಕೊಡುತ್ತಿದ್ದೆವು. ರಸ್ತೆ ನಿರ್ಮಾಣಕ್ಕೆ ನಿಯೋಜಿಸಿದ ಸೇನೆ ಕೂಡ ನಮ್ಮನ್ನು ಕ್ಯಾರ್ ಮಾಡುವುದಿಲ್ಲ. ಆದರೆ ನಮಗೆ ಇಲ್ಲಿ ಒಂದು ಶಿಬಿರದ ಅಗತ್ಯವಿಲ್ಲ. ಇದು ಸ್ಥಾಪನೆಯಾದರೆ ನಮ್ಮ ಓಡಾಟ ಒಡನಾಟ ಇತ್ಯಾದಿ ಆಚಾರಗಳೆಲ್ಲವೂ ನಿರೀಕ್ಷಣೆಯ ಅಧೀನವಾಗಬಹುದು. ನಕ್ಸಲರು, ಪೊಲೀಸರನ್ನು ಹೆದರಿ ಬದುಕಲು ನಾವು ಬಯಸಿಲ್ಲ. ಪ್ರತಿಭಟನಾ ಕಾರರಲ್ಲೊಬ್ಬರಾದ ಸುನೀಲ್ಕೊರ್ಸ ಹೇಳಿದರು. 35 ಮಂದಿ ಕಟುಂಬದ ಸದಸ್ಯ ಕೋರ್ಸದ ಹತ್ತು ಎಕರೆ ಜಮೀನಿನಲ್ಲಿ ಆರು ಎಕರೆ ಜಮೀನು ಸಿಆರ್ಪಿಎಫ್ ಶಿಬಿರಕ್ಕೆ ವಶಪಡಿಸಿಕೊಳ್ಳಲಾಗಿದೆ.
ಮಹಿಳೆಯರ ಸಹಿತ ಐವರನ್ನು ಬಂಧಿಸಲಾಗಿದೆ. ಮೃತಪಟ್ಟವರನ್ನು ಗುರುತಿಸಿಲ್ಲವೆಂದು ಕಾರಣ ಸೂಚಿಸಿ ಮೃತದೇಹಗಳನ್ನು ಇದುವರೆಗೆ ಕೊಟ್ಟಿಲ್ಲ. ಚುಡ್ವಾದ ಕಾವಾಸಿ ವಾ(37), ಗುಂಡಾಮ್ನ ಕೋರ್ಸ ಭೀಮ(32), ತಿಮ್ಮಪುರದ ಉಯ್ಕ ಮುರಳಿ(22) ಮೃತಪಟ್ಟಿರುವ ಪ್ರತಿಭಟನಾಕಾರರು ಆಗಿದ್ದಾರೆ. ಪೊಲೀಸ್ ದಾಳಿಯಲ್ಲಿ ಹದಿನೆಂಟು ಮಂದಿ ಗಾಯಗೊಂಡಿದ್ದಾರೆ. 11 ಮಂದಿಯನ್ನು ಸುಕ್ಮ ಫೀಲ್ಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಏಳು ಮಂದಿಯನ್ನು ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.












