ಸನ್ಮಾರ್ಗ ವಾರ್ತೆ
ಜೈಪುರ: ಮಧ್ಯಂತರದ ನಂತರ ಪುನಃ ರಾಜಸ್ತಾನ ಕಾಂಗ್ರೆಸ್ಸಿನಲ್ಲಿ ಒಡಕು ಮೂಡಿದೆ. ಸಚಿನ್ ಪೈಲಟ್ ನಿಕಟವರ್ತಿ ಶಾಸಕ ಹೆಮರಾಮ್ ಚೌಧರಿ ಸ್ಪೀಕರ್ಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ರಾಜೀನಾಮೆ ಕಾರಣ ಏನೆಂದು ಅವರು ಹೇಳಿಲ್ಲ. ರಾಜಸ್ತಾನ ಕಾಂಗ್ರೆಸ್ನಲ್ಲಿ ಹೊಸ ಸುನಾಮಿಗೆ ಈ ರಾಜೀನಾಮೆ ಕಾರಣವಾಗಬಹುದು ಎಂದು ರಾಜಕೀಯ ಮೂಲಗಳು ಹೇಳುತ್ತಿವೆ. ಮಾರ್ಚ್ನಲ್ಲಿ ನಡೆದ ವಿಧಾನಸಭಾ ಸಮ್ಮೇಳನದಲ್ಲಿ ತನ್ನ ಕ್ಷೇತ್ರದ ರಸ್ತೆ ಅಭಿವೃದ್ಧಿಯಲ್ಲಿ ತಾರತಮ್ಯವಾಗಿದೆ ಎಂದು ಅವರು ಹೇಳಿದ್ದರು. ನಿಮಗೂ ಬಿಜೆಪಿಗೂ ಏನು ವ್ಯತ್ಯಾಸ ಇದೆ ಎಂದು ಕೇಳಿದ್ದರು.
ಕಳೆದ ವರ್ಷ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಧ್ವನಿಯೆತ್ತಿದ ಉಪಮುಖ್ಯಮಂತ್ರಿ, ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಚಿನ್ ಪೈಲಟ್ ಜೊತೆ ಇದ್ದ ಹತ್ತೊಂಬ್ಬತ್ತು ಶಾಸಕರಲ್ಲಿ ಹೇಮಾರಾಮ್ ಕೂಡ ಇದ್ದರು. ಆದರೆ ಸಚಿನ್ ಪೈಲಟ್ನಿಂದ ವಾಪಾಸು ಪಡೆದ ಉಪಮುಖ್ಯಸ್ಥಾನಿ ಸ್ಥಾನ ಮತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಸಚಿನ್ ಪೈಲಟ್ಗೆ ನೀಡಿರಲಿಲ್ಲ.
ಹೇಮರಾಮ್ ಪಾರ್ಟಿಯ ಹಿರಿಯರು, ಗೌರವಾನ್ವಿತರು ಅವರ ರಾಜೀನಾಮೆ ಕಾರಣ ತಿಳಿದು ನಂತರ ಇತರ ನಿರ್ಧಾರಗಳನ್ನು ತಿಳಿಸುತ್ತೇನೆ. ನಾನು ಅವರೊಡನೆ ಮಾತಾಡುತ್ತೇನೆ. ಇದು ಒಂದು ಕಟುಂಬದ ವಿಷಯ ಅದನ್ನು ಪರಿಹರಿಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ಹೇಳಿದ್ದಾರೆ.












