ರಾಮ್ ದೇವ್ ವಿರುದ್ಧ ಪ್ರತಿಭಟನೆ: ಕರಾಳ ದಿನಾಚರಿಸಿದ ವೈದ್ಯರು

0
534

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಬಾಬಾ ರಾಮ್‍ದೇವ್‍ ರವರು ಅಲೋಪತಿ ಚಿಕಿತ್ಸೆಯನ್ನು ಕಟುವಾಗಿ ಟೀಕಿಸಿದ್ದನ್ನು ವೈದ್ಯರು ಕರಾಳ ದಿನಾಚರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ಸಂಘಟನೆ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (ಫೋರ್ಡ್) ಕಪ್ಪು ದಿನಾಚರಣೆಗೆ ಕರೆ ನೀಡಿತ್ತು.

ಅವಹೇಳನಕಾರಿ ದ್ವೇಷಪೂರಿತ ಹೇಳಿಕೆಗಳನ್ನು ಖಂಡಿಸುತ್ತಿದ್ದೇವೆ ಮತ್ತು ದೇಶಾದ್ಯಂತ ರೋಗಿಗಳ ಶುಶ್ರೂಷೆಗೆ ಅಡ್ಡಿಯಾಗದಂತೆ ಪ್ರತಿಭಟನೆ ನಡೆಸುತ್ತೇವೆ ಎಂದು ಬೋರ್ಡ್ ತಿಳಿಸಿದೆ.

ರಾಮ್‍ದೇವ್ ಬಹಿರಂಗವಾಗಿ ಮತ್ತು ನಿಶ್ಶರ್ತವಾಗಿ ಎಂದು ಫೋರ್ಡ್ ಆಗ್ರಹಿಸಿದೆ. ಇದೇ ವೇಳೆ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಗುಜರಾತ್ ಘಟಕ ಬಾಬಾ ರಾಮ್‍ದೇವ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ಅಂಟು ರೋಗ ಕಾನೂನು ಪ್ರಕಾರ ರಾಮ್ ದೇವ್ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಗುಜರಾತ್ ಐಎಂಎಐದು ರಾಜ್ಯ ಘಟಕಗಳು ಪೊಲೀಸರಿಗೆ ದೂರು ನೀಡಿದ ಬೆನ್ನಿಗೆ ಗುಜರಾತ್ ಐಎಂಎ ಕೂಡ ದೂರು ನೀಡಿದೆ.