ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರತಿಮೆ ಪ್ರತಿಷ್ಠಾಪನೆ ಯೋಜನೆಗೆ ಸಾಧುಗಳಿಂದ  ವಿರೋಧ; ವೈರಲ್ ಆಗದ ಸುದ್ದಿ

0
1445

ಲಕ್ನೋ: ವಾರಣಾಸಿಯಲ್ಲಿ ಕಳೆದ ವಾರನಡೆದ ಧರ್ಮ ಸಂಸದ್ ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರು ಅಯೋಧ್ಯೆಯಲ್ಲಿ ರಾಮ ಪ್ರತಿಮೆ ಪ್ರತಿಷ್ಠಾನ ಮಾಡುವ ಯೋಜನೆಯ ಕುರಿತು ಹೇಳಿದ ಬೆನ್ನಿನಲ್ಲಿಯೇ ಸಾಧುಗಳಿಂದ  ಭಾರೀ ವಿರೋಧ ಕೇಳಿ ಬಂದುದು ಹೆಚ್ಚು ಸುದ್ದಿಗೀಡಾಗಿಲ್ಲ.

ಆದಿತ್ಯನಾಥ ಸರಕಾರವು 221 ಮೀಟರ್ ಎತ್ತರದ ರಾಮ‌ ಪ್ರತಿಮೆಯನ್ನು ಅಯೋಧ್ಯೆಯಲ್ಲಿ ನಿರ್ಮಿಸುವ ಯೋಜನೆಯ ಪ್ರಸ್ತಾಪವನ್ನು ಹಿಂದೂ ಸಾಧುಗಳು  ಬಲವಾಗಿ ವಿರೋಧಿಸಿದ್ದರು.

ಶ್ರೀ ರಾಮ ಪ್ರತಿಮೆಯನ್ನು ಪ್ರತಿಷ್ಠಾಪಿಸುವುದು ಹಿಂದೂ ಸಾಧುಗಳ  ಪ್ರಕಾರ ಅವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾದುದಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಆದಿತ್ಯನಾಥ ಸರಕಾರಕ್ಕೆ ತಿಳಿಸಿದರು.

ದೇಶದಾದ್ಯಂತ ಈಗಾಗಲೇ ಹಲವಾರು ಮಹಾಪುರುಷರ ಪ್ರತಿಮೆಗಳು ತಲೆ ಎತ್ತಿ ನಿಂತಿವೆ. ವಿವಾದಾತ್ಮಕ ಸ್ಥಳದಲ್ಲಿ ಶ್ರೀ ರಾಮ‌ ಪ್ರತಿಮೆಯನ್ನು ಸ್ಥಾಪಿಸುವುದರಿಂದ ಪೂಜೆಯನ್ನು ನಡೆಸಬಹುದು ಎಂಬ ವಿಚಾರವನ್ನು ವ್ಯಕ್ತಪಡಿಸಲಾಯ್ತಾದರೂ  ಸ್ವಾಮೀ ಅಮುಕ್ತೇಶ್ವರಾನಂದ ರವರು ‘ಪ್ರಣ್ ಪ್ರತಿಷ್ಠಾ’ದ ನಂತರ ಶ್ರೀ ರಾಮ‌ ಪ್ರತಿಮೆಯನ್ನು ಪ್ರರತಿಷ್ಠಾಪಿಸಬಹುದು.  ಇದಾದನಂತರವೇ ಪೂಜಾ ಕಾರ್ಯಗಳನ್ನು ಕೈಗೊಳ್ಳಬಹುದು ಎಂದರು.

ಶಂಕರಾಚಾರ್ಯ ಸ್ವಾಮೀ ಸ್ವರೂಪಾನಂದ ಸರಸ್ವತೀಯವರು ವಿಶ್ವ ಹಿಂದೂ ಪರಿಷದ್( ವಿಹೆಚ್ ಪಿ) ನಡೆಸಿದ ಧರ್ಮ ಸಭಾವನ್ನು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾದುದು ಎಂದು ಆರೋಪಿದರು.

” ನಾವು ಸಮಾಜದ ಕೋಮುಸಾಮರಸ್ಯ ಕೆಡಿಸದೇ ಶ್ರೀ ರಾಮ ಮಂದಿರವನ್ನು ನಿರ್ಮಿಸಲು ಬಯಸುತ್ತೇವೆ. ನಮಗೆ ಈ ವಿಷಯದಲ್ಲಿ ಯಾರೊಂದಿಗೂ ಯಾವುದೇ ರೀತಿಯ ವಾಗ್ವಾದ ನಡೆಸಲು ಇಚ್ಛಿಸುವುದಿಲ್ಲ. ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷದ್ ನಡೆಸಿದ ಧರ್ಮ ಸಭಾ ಸಂಪೂರ್ಣ ರಾಜಕೀಯ ಹಿತಾಸಕ್ತಿಗಳನ್ನು ಒಳಗೊಂಡಿದ್ದಾಗಿತ್ತು. ಅವರು ಸ್ಮಾರಕಗಳನ್ನು ನಿರ್ಮಿಸ ಬಯಸುತ್ತಾರೆ.  ಆದರೆ ನಾವು ಜನರಿಗೆ ಆರಾಧನಾಲಯವನ್ನು ನಿರ್ಮಿಸಲು ಬಯಸುತ್ತೇವೆ. ನಮ್ಮ ಈ ನಿಲುವು ಮುಸ್ಲಿಮ್ ವಿರೋಧಿಯಾದುದಲ್ಲ. ಅಯೋಧ್ಯೆಯಲ್ಲಿ ಧರ್ಮ ಸಭಾ ನಡೆಸುತ್ತಿರುವವರು ಸಂಪೂರ್ಣ ರಾಜಕೀಯ ಹಿತಾಸಕ್ತಿ ಪ್ರೇರಿತರು” ಎಂದು ಅವರು ಆರೋಪಿಸಿದರು.

ಉತ್ತರ ಪ್ರದೇಶ ಸರಕಾರವು 221 ಮೀಟರ್ ಎತ್ತರದ ಕಂಚಿನ ಶ್ರೀ ರಾಮ ಪ್ರತಿಮೆಯನ್ನು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸುವ ಯೋಜನೆಯನ್ನು ನಿರ್ಮಿಸಿದ್ದು, ಅವನೀಶ್ ಅವಸ್ಥೀಯವರು ಈ ಕುರಿತಾದ ಮಾಹಿತಿಯನ್ನು ಬಹಿರಂಗ ಪಡಿಸಿದರು. ಶ್ರೀ ರಾಮ ಪ್ರತಿಮೆಯು 151 ಮೀಟರ್ ಎತ್ತರದ್ದಾಗಿದ್ದು ಇದನ್ನು 50 ಮೀಟರ್ ಎತ್ತರದ ಮೂರ್ತಿಪೀಠದ ಮೇಲೆ ಸ್ಥಾಪಿಸಲಾಗುವುದು. ಇದಲ್ಲದೇ ಈ ಪ್ರತಿಮೆಯ ಶಿರ ಕವಚ ಛತ್ರವು 20 ಮೀಟರ್ ಗಳಷ್ಟು ಎತ್ತರವನ್ನು ಒಳಗೊಂಡಿರುವುದು. ಒಟ್ಟು 221 ಮೀಟರ್ ಗಳ ಎತ್ತರವನ್ನು ಈ ಪ್ರತಿಮೆಯು ಒಳಗೊಂಡಿರುವುದು.

ಇದಲ್ಲದೇ ಪ್ರತಿಮೆಯ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಕಂಡುಕೊಳ್ಳಲು ಈಗಾಗಲೇ ಐದು ಸ್ಥಳಗಳನ್ನು ಗುರುತಿಸಲಾಗಿದ್ದು ಇವುಗಳಲ್ಲಿ ಸೂಕ್ತ ಸ್ಥಳವನ್ನು ಗುರುತಿಸಲು ಮಣ್ಣನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ಯೋಜನೆಯನ್ನು ನಿರೂಪಿಸಿದರು.

ಇದಲ್ಲದೇ ಸರಕಾರವು ರಾಮ ಕುಟಿ, ಗೆಸ್ಟ್ ಹೌಸ್ ಹಾಗೂ ಗ್ರೌಂಡ್ ನಿರ್ಮಿಸಲು ಯೋಜನೆಯನ್ನು ರೂಪಿಸಿದ್ದು ಗುರುಕುಲ್ ಸರಾಯು ನದಿತೀರ ಮತ್ತು ಘಾಟ್ ಗಳ ಸೌಂದರ್ಯ ವೀಕ್ಷಣೆಗೆ ಪ್ರವಾಸಿ ತಾಣವನ್ನಾಗಿಸಲು ಮುಂದಾಗಿದೆ.