ಇಸ್ರೇಲ್ ನಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿರುವೆ: ಭೇಟಿಯ ವೇಳೆ ಬಹಿರಂಗಪಡಿಸಿದ ಚಾಡ್ ಅಧ್ಯಕ್ಷ ಇದ್ರೀಸ್

0
990

ಇಸ್ರೇಲ್ ಗೆ  ಭೇಟಿ ನೀಡಿರುವ ಚಾಡ್ ಗಣರಾಜ್ಯದ ಅಧ್ಯಕ್ಷ ಇದ್ರೀಸ್ ದೆಬಿ ಯವರು  ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ್ದು, ಇಸ್ರೇಲ್ ಸಹಕಾರದೊಂದಿಗೆ “ಎಲ್ಲಾ ಆಯ್ಕೆಗಳು ತೆರೆದಿವೆ” ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ.

ಇದರರ್ಥ  ಫೆಲೆಸ್ತೀನ್  ಸಮಸ್ಯೆಯನ್ನು ತೆಗೆದುಹಾಕಲಾಗಿದೆ ಎಂದಲ್ಲ.  1970 ರ ದಶಕದಲ್ಲಿ ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿದಂದಿನಿಂದ ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಉತ್ತಮವಾಗಿರಲಿಲ್ಲ ಎಂದು ಅವರು ಒಪ್ಪಿಕೊಂಡರು . ಉತ್ತರ ಬಂಡುಕೋರರೊಂದಿಗಿನ ಯುದ್ಧದ ಸಮಯದಲ್ಲಿ ಇಸ್ರೇಲ್ ತನ್ನ ದೇಶಕ್ಕೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದೆ ಎಂದು ಅವರು ಹೇಳಿದರು . “ನಾವು ಈ ಶತಮಾನದ ಅಸಹ್ಯಕರವಾದ ದುಷ್ಟತೆಯ  ವಿರುದ್ಧದ ಹೋರಾಟವನ್ನು ಹಂಚಿಕೊಂಡಿದ್ದೇವೆ, ಅದು ಭಯೋತ್ಪಾದನೆಯಾಗಿದೆ.”

ಇಸ್ರೇಲಿ-ಫೆಲೆಸ್ತೀನ್  ಸಂಘರ್ಷವು ಶಾಂತಿಯುತ ಪರಿಹಾರದೊಂದಿಗೆ ಕೊನೆಗೊಳ್ಳುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದು, ಮತ್ತು ಅಂತಹ ಧನಾತ್ಮಕ ಫಲಿತಾಂಶಕ್ಕೆ ಉತ್ತಮ ಮಾತುಕತೆ ಆಧಾರವಾಗಿದೆ ಎಂದು ಒತ್ತಿ ಹೇಳಿದರು.

ಇಸ್ರೇಲ್ ಚಾನಲ್ 13 ಟಿವಿ ಪ್ರಕಾರ, ಅನಾಮಧೇಯ ಹಿರಿಯ ಇಸ್ರೇಲಿ ಅಧಿಕಾರಿ ಹೇಳುತ್ತಾರೆ-  ಇಸ್ರೇಲ್ ಸುಡಾನ್, ನೈಜರ್ ಮತ್ತು ಮಾಲಿಯೊಂದಿಗೆ ಸಂಬಂಧವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.   ಇದಕ್ಕೆ  ಮುಖ್ಯ ಕಾರಣವೆಂದರೆ, ಅಮೆರಿಕಾಕ್ಕೆ ಹೋಗುವ ದಾರಿಯಲ್ಲಿ ಇಸ್ರೇಲಿ ವಿಮಾನಕ್ಕೆ  ಆಫ್ರಿಕನ್ ವಾಯುಪ್ರದೇಶವನ್ನು    ಅಧಿಕೃತವಾಗಿ  ಬಳಸಲು ಅನುಮತಿಸುವುದಾಗಿದೆ.