ಸನ್ಮಾರ್ಗ ವಾರ್ತೆ
ಮಂಗಳೂರು: ಈ ಹಿಂದೆ ಅರ್ಚಕರಿಗೆ ಪರಿಹಾರ ಘೋಷಿಸಿದಂತೆ ಎಲ್ಲಾ ಧಾರ್ಮಿಕ ಗುರುಗಳಿಗೂ ಪರಿಹಾರ ನೀಡಬೇಕೆಂಬ ಹಲವು ಸಂಘಟನೆಗಳ ಮನವಿಗೆ ಸ್ಪಂದಿಸಿದ ರಾಜ್ಯ ಸರಕಾರ ಈಗ ಮಸೀದಿ ಸಿಬ್ಬಂದಿಗಳಿಗೆ ಸಣ್ಣ ಮೊತ್ತದ ಪ್ಯಾಕೇಜ್ ಬಿಡುಗಡೆ ಮಾಡಿದೆ. ಸರಕಾರದ ಈ ಕ್ರಮವನ್ನು ಸ್ವಾಗತಿಸಿರುವ ರಾಜ್ಯ ದಾರಿಮಿ ಉಲಮಾ ಒಕ್ಕೂಟವು ಮದ್ರಸ ಅಧ್ಯಾಪಕರಿಗೂ ಲಾಕ್ ಡೌನ್ ಪ್ಯಾಕೇಜ್ ವಿಸ್ತರಿಸುವಂತೆ ಆಗ್ರಹಿಸಿದೆ.
ಕೊರೋನ ಸಂತ್ರಸ್ತರ ಸಾಲಿನಲ್ಲಿ ನಿಲ್ಲುವ ಮೊದಲ ವರ್ಗವೆಂದರೆ ಅದು ಶಿಕ್ಷಕ ವರ್ಗದವರಾಗಿದ್ದಾರೆ. ಸರಕಾರಿ ಶಿಕ್ಷಕರಿಗೆ ಯಥಾಪ್ರಕಾರ ಭತ್ತೆ ಸಿಗುತ್ತಿದ್ದರೂ ಖಾಸಗಿ ಅಧ್ಯಾಪಕರಿಗೆ ಮತ್ತು ಮುಸ್ಲಿಂ ಸಮಾಜದ ಮದ್ರಸ ಮುಹಲ್ಲಿಮರಿಗೆ ಕೊರೋನದಿಂದಾಗಿ ಬಹಳ ಸಂಕಷ್ಟ ಎದುರಾಗಿದೆ. ಬಡತನದಲ್ಲೇ ಕಾಲ ಕಳೆಯುತ್ತಿರುವ ಈ ವರ್ಗ ಈಗ ಲಾಕ್ ಡೌನ್ ನಿಮಿತ್ತ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ. ಆದ್ದರಿಂದ ಈಗ ಘೋಷಿಸಲಾದ ಪ್ಯಾಕೇಜ್ ನ ಫಲಾನುಭವಿಗಳಲ್ಲಿ ಇವರನ್ನೂ ಸೇರಿಸಬೇಕೆಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಮುಖಂಡರಾದ ಎಸ್ . ಬಿ. ದಾರಿಮಿ ಸರಕಾರವನ್ನು ಆಗ್ರಹಿಸಿದ್ದಾರೆ.












