ಸನ್ಮಾರ್ಗ ವಾರ್ತೆ
ಅಂಟಿಗುವ: ಭಾರತದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯವರನ್ನು ಕೆರೆಬಿಯನ್ ದ್ವೀಪ ಡೊಮಿನಿಕದಿಂದ ಕರೆತರಲು ಹೋದ ಭಾರತದ ತಂಡ ಬರಿಗೈಯಲ್ಲಿ ಮರಳಿ ಬಂದಿದೆ. ಚೊಕ್ಸಿಯ ವಿರುದ್ಧ 14,000 ಕೋಟಿ ರೂಪಾಯಿ ವಂಚನೆ ಆರೋಪ ಇದೆ.
ಎಂಟು ಮಂದಿಯ ಸಿಬಿಐ ತಂಡ ಮೇ 28ಕ್ಕೆ ಬಾಂಬೊರ್ಡಿಯನ್ ಗ್ಲೋಬಲ್ 5000 ಬಿಸಿನೆಸ್ ಜೆಟ್ನಲ್ಲಿ ಡೊಮಿನಿಕಕ್ಕೆ ಹೋಗಿತ್ತು. ಡೊಮನಿಕ್ನ ಆಸ್ಪತ್ರೆಯಲ್ಲಿ ಚೊಕ್ಸಿ ಈಗಿದ್ದಾರೆ. ಒಂದು ತಿಂಗಳೊಳಗೆ ಇವರನ್ನು ಊರಿಗೆ ಕರೆತರುವುದು ಕಷ್ಟವೆಂದು ಮನಗಂಡು ಸಿಬಿಐ ತಂಡ ವಾಪಾಸು ಬಂದಿದೆ. ಡೊಮನಿಕ್ನ ಎರಡು ಕೋರ್ಟಿನಲ್ಲಿ ಗಡೀಪಾರು ಕುರಿತು ಕೇಸು ನಡೆಯುತ್ತಿದ್ದು ತೀರ್ಪು ಹೊರ ಬರುವವರೆಗೆ ಚೋಕ್ಸಿಯವರನ್ನು ಕರೆತರಲು ಸಾಧ್ಯವಿಲ್ಲಂದತಾಗಿದೆ.
ಚೊಕ್ಸಿಯವರು ತನ್ನ ಬಂಧನ ಕಾನೂನು ಬಾಹಿರವೆಂದು ಕೇಸು ಕೊಟ್ಟಿದ್ದಾರೆ. ಚೊಕ್ಸಿ ಕಾನೂನು ಬಾಹಿರವಾಗಿ ಡೊಮಿನಿಕ್ಗೆ ಬಂದಿದ್ದಾರೆ ಎಂದು ಇನ್ನೊಂದು ಕೇಸು ನಡೆಯುತ್ತಿದೆ. ಇದರಲ್ಲೂ ತೀರ್ಪು ಬಂದಿಲ್ಲ. ಆಸ್ಪತ್ರೆಯಲ್ಲಿದ್ದರೂ ಕ್ರಮ ಪೂರ್ಣಗೊಳ್ಳುವವರೆಗೆ ಚೊಕ್ಸಿ ಪೊಲೀಸ್ ಕಸ್ಟಡಿಯಲ್ಲಿರುತ್ತಾರೆ. ಕಾನೂನು ಬಾಹಿರವಾಗಿ ದೇಶ ಪ್ರವೇಶಿಸಿದ ಪ್ರಕರಣದಲ್ಲಿ ಅವರಿಗೆ ಜಾಮೀನು ನಿರಾಕರಣೆಯಾಗಿದೆ. ಅಂಟಿಗುವಾ ಪೌರತ್ವವನ್ನು 2018ರಲ್ಲಿ ಅವರು ಪಡೆದುಕೊಂಡಿದ್ದು ನಂತರ ಭಾರತ ತೊಡೆದಿದ್ದರು. ಕಳೆದ ತಿಂಗಳವರೆಗೂ ಅಲ್ಲಿದ್ದರು.
ಮೇ 23ಕ್ಕೆ ಡೊಮಿನಿಕ್ಕೆ ಹೋಗಿದ್ದು ಕೇಸಿನ ತಿರುವು ಆಗಿದೆ. ಅವರ ಜೊತೆಗೆ ಅವರ ಗರ್ಲ್ ಫ್ರೆಂಟ್ ಇದ್ದಾರೆ ಎಂದು ವರದಿಯಾಗಿತ್ತು. ಅನುಮತಿ ಪಡೆಯದೆ ದೇಶಕ್ಕೆ ಬಂದಿದ್ದಾರೆ ಎಂದು ಡೊಮನಿಕ ಪೊಲಿಸರು ಚೊಕ್ಸಿಯನ್ನು ಬಂಧಿಸಿತ್ತು. ಭಾರತಕ್ಕೆ ಹಸ್ತಾಂತರಿಸುವ ಸೂಚನೆಯನ್ನು ಆಂಟಿಗುವ ನೀಡಿತ್ತು. ಚೊಕ್ಸಿ ಭಾರತಕ್ಕೆ ಕರೆತರುವ ಪ್ರಕ್ರಿಯೆ ತ್ವರಿತಗೊಳಿಸಲಾಗುವುದು ಎಂದು ವಿದೇಶ ಸಚಿವಾಲಯ ವಕ್ತಾರ ಅರಿಂದಂ ಬಗ್ಚಿ ಹೇಳಿದರು.












