ಮೋದಿಗೆ ಕೃತಜ್ಞತೆ ಹೇಳಲು ಕ್ಯಾಂಪಸ್‍ಗಳಿಗೆ ಮನಸ್ಸಿಲ್ಲ: ಪ್ರತಿಭಟನಾ ಬ್ಯಾನರ್ ಹಾಕಿ ವಿರೋಧ ವ್ಯಕ್ತಪಡಿಸಿದ ಫ್ರಟರ್ನಿಟಿ ಮೂವ್‍ಮೆಂಟ್

0
429

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ಹದಿನೆಂಟು ವರ್ಷದ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ ಘೋಷಿಸಿದ ಬೆನ್ನಿಗೆ ಕೃತಜ್ಞತೆ ತಿಳಿಸಿ ಬ್ಯಾನರ್ ಹಾಕಬೇಕೆಂಬ ಯುಜಿಸಿ ನಿಲುವನ್ನು ಸೃಜನಾತ್ಮಕವಾಗಿ ವೆಲ್ಫೇರ್ ಪಾರ್ಟಿಯ ವಿದ್ಯಾರ್ಥಿ ಘಟಕ ಫ್ರಟರ್ನಿಟಿ ಮೂವ್‍ಮೆಂಟ್ ವಿರೋಧಿಸಿದ್ದು, ಮೋದಿಗೆ ಕೃತಜ್ಞತೆ ಹೇಳಲು ಕ್ಯಾಂಪಸ್‍ಗಳಿಗೆ ಮನಸ್ಸಿಲ್ಲ ಎಂಬ ಬೃಹತ್ ಬ್ಯಾನರ್ ಹಾಕಿ ವಿರೋಧ ವ್ಯಕ್ತಪಡಿಸಿದೆ.

ಕಾಲೇಜು ದ್ವಾರದಲ್ಲಿ ಮಲಯಾಳಂ ಭಾಷೆಯಲ್ಲಿ ಬ್ಯಾನರ್ ಹಾಕಿರುವ ಫ್ರಟರ್ನಿಟಿ ಮೂವ್‍ಮೆಂಟ್ ಕೇರಳ ಘಟಕೆ, ಮೋದಿಗೆ ಕೃತಜ್ಞತೆ ಹೇಳಲು ಕ್ಯಾಂಪಸ್‍ಗಳಿಗೆ ಮನಸಿಲ್ಲ ಎಂದು ಬರೆದಿದೆ. ರಿಝೈನ್ ಮೋದಿ ಎಂಬ ತಲೆ ಬರಹದಲ್ಲಿ ಬೃಹತ್ ಬ್ಯಾನರ್ ಗಳು ಕಾಲೇಜು ಮಹಾರಾಜ ಕಾಲೇಜಿನ ಗೇಟ್ ಮುಂಭಾಗ ಸೇರಿದಂತೆ ವಿವಿಧ ಕ್ಯಾಂಪಸ್ ಗಳಲ್ಲಿ ನೇತು ಹಾಕಿ ತಮ್ಮದೇ ಶೈಲಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದೆ. ಯುಜಿಸಿ ತೀರ್ಮಾನವು ಪ್ರಧಾನ ವಿಶ್ವವಿದ್ಯಾನಿಲಯಗಳನ್ನು ಹಿಂದುತ್ವೀಕರಿಸುವ ಕೇಂದ್ರ ಸರಕಾರದ ಕ್ರಮ ಇದು. ಹಾಗಾಗಿ ಇದಕ್ಕೆ ನಮ್ಮ ವಿರೋಧ ಎಂದು ಫೆಟರ್ನಿಟಿ ಮೂವ್‍ಮೆಂಟ್ ತಿಳಿಸಿದೆ.

‘ಥ್ಯಾಂಕ್ಯೂ ಮೋದೀಜಿ’ ಎಂಬ ಬ್ಯಾನರ್ ಹಾಕಲು ಯುಜಿಸಿ ತೀರ್ಮಾನಿಸಿತ್ತು. ಇದರ ವಿರುದ್ಧ ಕೇರಳದಲ್ಲಿ ವ್ಯಾಪಕ ವಿರೋಧ ಕಂಡು ಬಂದಿದೆ.