ಸನ್ಮಾರ್ಗ ವಾರ್ತೆ
ಪಟ್ನಾ: ಬಿಹಾರದ ಕಟಿಹಾರದಲ್ಲಿ ಮಾಜಿ ಮೇಯರ್‌ರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ನಗರದ ಮಂದಿರವೊಂದರ ಸಮೀಪದಲ್ಲಿ ಬೈಕ್‍ನಲ್ಲಿ ಬಂದು ಅಜ್ಞಾತ ವ್ಯಕ್ತಿಗಳ ಗುಂಡಿಗೆ ಶಿವರಾಜ್ ಪಾಸ್ವಾನ್(45) ಬಲಿಯಾದರು ಎಂದು ಪೊಲೀಸ್ ಸುಪರಿಡೆಂಟ್ ವಿಕಾಸ್ ಕುಮಾರ್ ತಿಳಿಸಿದ್ದಾರೆ. ಗುಂಡೇಟಿಗೊಳಗಾದ ಕೂಡಲೇ ಪಾಸ್ವಾನ್‍ರನ್ನು ಆಸ್ಪತ್ರೆಗೆ ಸಾಗಿಸಲಾದರೂ ಅವರು ಮೃತಪಟ್ಟಿದ್ದಾರೆ.
ಮೇಯರ್ ವಿಜಯ್ ಸಿಂಗ್ ಬರರಿ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದ ನಂತರ ಮಾರ್ಚ್‍ನಲ್ಲಿ ಮೇಯರ್ ಆಗಿ ಪಾಸ್ವಾನ್ ಅವಿರೋಧವಾಗಿ ಆಯ್ಕೆಯಾಗಿದ್ದು, ಜೂನ್‍ನಲ್ಲಿ ಅವರ ಅಧಿಕಾರ ಅವಧಿ ಕೊನೆಗೊಂಡಿತ್ತು. ಈಗ ಮುನ್ಸಿಪಾಲಿಟಿಯ ಆಡಳಿತವನ್ನು ಆಡಳತಾಧಿಕಾರಿ ನಿರ್ವಹಿಸುತ್ತಿದ್ದಾರೆ.












