ಜಾಗತಿಕ ದೇಶಗಳು ತಾಲಿಬಾನಿನೊಂದಿಗೆ ಸಂಬಂಧ ಬೆಳಸಬೇಕು- ಚೀನ

0
598

ಸನ್ಮಾರ್ಗ ವಾರ್ತೆ

ಬೀಜಿಂಗ್: ಅಫ್ಘಾನಿಸ್ತಾನದ ಪರಿಸ್ಥಿತಿಯಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ ತಾಲಿಬಾನಿನೊಂದಿಗೆ ಎಲ್ಲರೂ ಸಂಬಂಧ ಕುದುರಿಸಿಕೊಳ್ಳಬೇಕಾಗಿದೆ ಎಂದು ಅಮೆರಿಕಕ್ಕೆ ಚೀನ ಹೇಳಿದೆ. ಅಮೆರಿಕ ಸಹಿತ ಅಂತಾರಾಷ್ಟ್ರೀಯ ಸಮುದಾಯ ಆರ್ಥಿಕ ಮತ್ತು ಮಾನವೀಯ ಸಹಾಯ ನೀಡಿ ತಾಲಿಬಾನ್‍ಗೆ ಮಾರ್ಗದರ್ಶನ ಮಾಡಬೇಕೆಂದು ಚೀನದ ವಿದೇಶ ಸಚಿವ ವಾಂಗ್‍ಯಿ ಅಮೆರಿಕದ ಸ್ಟೇಟ್ ಕಾರ್ಯದಶಿ ಆಂಟನಿ ಬ್ಲಾಂಕ್‍ಗೆ ಫೋನ್ ಕರೆ ಮಾಡಿ ಹೇಳಿದ್ದಾರೆ.

ಅಮೆರಿಕದ ಹಿಂದೆ ಸರಿಯುವಿಕೆಯ ನಂತರ ವಿದೇಶಿ ಪ್ರಜೆಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲು ತಾಲಿಬಾನಿನಿಂದ ಭರವಸೆ ಪಡೆದುಕೊಳ್ಳುವ ಸಲುವಾಗಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಮಧ್ಯಪ್ರವೇಶಿಸಬೇಕೆಂದು ಬ್ಲಿಂಕನ್ ಹೇಳಿದರು. ಭಯೋತ್ಪಾದನಾ ದಾಳಿ, ಭಯೋತ್ಪಾದನೆಯ ಕೇಂದ್ರವಾಗಿ ಅಫ್ಘಾನಿಸ್ತಾನ ಬದಲಾಗದು ಎಂದು ಭರವಸೆ ಕೊಡಲು ತಾಲಿಬಾನಿನೊಂದಿಗೆ ಆಗ್ರಹಿಬೇಕೆಂದು ಬ್ಲಿಂಕನ್ ಹೇಳಿದರು.

ಅಫ್ಘಾನಿಸ್ತಾನದಿಂದ ಅಮೆರಿಕನ್ ಸೈನ್ಯ ಆಗಸ್ಟ್ 31ರೊಳಗೆ ಸಂಪೂರ್ಣ ತೆರವುಗೊಳಿಸುವುದಾಗಿ ಅಮೆರಿಕ ಈಗಾಗಲೇ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಚೀನ ಮತ್ತು ಅಮೆರಿಕ ಅಫ್ಘಾನಿಸ್ತಾನದ ಸ್ಥಿತಿಗತಿಗಳ ಕುರಿತು ಚರ್ಚಿಸಿವೆ.