ಆರ್ಥಿಕ‌ ರಂಗದಲ್ಲಿ ನಾಳೆಯಿಂದ ಆಗುವ ಬದಲಾವಣೆಗಳಿವು: ಗಮನಿಸಿರಿ

0
888

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸೆಪ್ಟೆಂಬರ್ ಒಂದರಿಂದ ಸಾಮಾನ್ಯರನ್ನು ಬಾಧಿಸುವ ಕೆಲವು ನಿರ್ಣಾಯಕ ಬದಲಾವಣೆಗಳನ್ನು ಆರ್ಥಿಕ ಕ್ಷೇತ್ರದಲ್ಲಿ ತರಲಾಗುತ್ತಿದೆ. ಆಧಾರ್-ಪಾನ್ ಕಾರ್ಡ್ ಜೋಡಣೆ, ಅಡಿಗೆ ಅನಿಲ ಬೆಲೆ ಹೆಚ್ಚಳದವರೆಗೂ ಇದು ಆಗಲಿದೆ. ಬುಧವಾರದಿಂದ ಜಾರಿಗೆ ಬರುವ ಪ್ರಮುಖ ಬದಲಾವಣೆಗಳಿವು.

ಪಾನ್-ಆಧಾರ್ ಜೋಡಣೆ:
ಸೆಪ್ಟಂಬರ್ 30ರೊಳಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಕಡ್ಡಾಯವಾಗಿ ಜೋಡಿಸಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೂಚಿಸಿದೆ. ಪಾನ್ ಕಾರ್ಡ್-ಆಧಾರ್ ಜೋಡಣೆ ಮಾಡದಿದ್ದರೆ ಫಲಾನುಭವಿಗಳಿಗೆ ಎಸ್‍ಬಿಐಯ ಕೆಲವು ಸೇವೆಗಳು ಲಭಿಸುವುದಿಲ್ಲ. ಪ್ರತಿದಿನ ಐವತ್ತು ಸಾವಿರ ಮತ್ತು ಅದಕ್ಕಿಂತ ಹೆಚ್ಚು ವ್ಯವಹಾರ ನಡೆಸುವವರಿಗೆ ಪಾನ್ ಕಾರ್ಡ್ ಬೇಕು. ಆದುದರಿಂದ ಆದಾಯ ಇಲಾಖೆ ವೆಬ್‍ಸೈಟ್‍ನಲ್ಲಿ ಆಧಾರ್ ಕಾರ್ಡ್ ಪಾನ್ ಕಾರ್ಡ್‌ನ್ನು ಜೋಡಣೆ ಮಾಡಬೇಕು.

ಅಡುಗೆ ಅನಿಲ ಬೆಲೆ:
ಸೆಪ್ಟಂಬರ್‌ನಲ್ಲಿ ಅಡಿಗೆ ಅನಿಲ ದರ ಹೆಚ್ಚಳವಾಗಬಹುದು. ಜುಲೈ, ಆಗಸ್ಟ್ ತಿಂಗಳಲ್ಲಿ ನಿರಂತರ ಅಡುಗೆ ಅನಿಲ ಬೆಲೆಯನ್ನು ಸರಕಾರ ಹೆಚ್ಚಿಸಿತ್ತು. ಇದೇ ಅವಸ್ಥೆ ಸೆಪ್ಟಂಬರಿನಲ್ಲಿಯೂ ಮುಂದುವರಿಯಲಿದೆ ಎಂದು ಮೂಲಗಳು ಹೇಳುತ್ತಿವೆ. ಆಗಸ್ಟ್‌ನಲ್ಲಿ 25 ರೂಪಾಯಿ ಹೆಚ್ಚಿಸಿದ್ದರು. ಜುಲೈಯಲ್ಲಿ 25.50 ರೂ. ಹೆಚ್ಚಿಸಲಾಗಿತ್ತು.

ಆಧಾರ್-ಪಿಎಫ್ ಜೋಡಣೆ
ಸೆಪ್ಟಂಬರಿನಿಂದ ಯುಎ ಯುನಿವರ್ಸಲ್ ಅಕೌಂಟು ನಂಬರ್‌ಗೆ ಆಧಾರ್ ಕಾರ್ಡು ಕಡ್ಡಾಯವಾಗಿ ಜೋಡಿಸಬೇಕೆಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಆಧಾರ್ ಕಾರ್ಡಿಗೆ ಜೋಡಿಸದೆ ಪಿಎಫ್ ಖಾತೆಗೆ ಕೆಲಸದ ಮಾಲಕ ಹಣ ಪಾವತಿಸುವಂತಿಲ್ಲ. ಸಾಮಾಜಿಕ ಸುರಕ್ಷಾ ಕಾರ್ಡಿನ ಸೆಕ್ಷನ್ 142 ತಿದ್ದುಪಡಿ ಮೂಲಕ ಕೇಂದ್ರ ಸರಕಾರ ಹೊಸ ಬದಲಾವಣೆ ತಂದಿದೆ.

ಜಿಎಸ್‍ಟಿ ರಿಟರ್ನ್
ಸೆಪ್ಟಂಬರಿನಿಂದ ಜಿಎಸ್‍ಟಿ ಆರ್-1 ಸಲ್ಲಿಕೆಯಲ್ಲಿ ಬದಲಾವಣೆ ತರಲಾಗುವುದು ಎಂದು ಜಿಎಸ್‍ಟಿಎನ್ ತಿಳಿಸಿದೆ. ಜಿಎಸ್‍ಟಿ ಆರ್-3 ಬಿ ಪ್ರಕಾರ ರಿಟರ್ನ್ ಸಲ್ಲಿಸದಿದ್ದವರಿಗೆ ಜಿಎಸ್‍ಟಿಆರ್-1 ಫಾರ್ಮ್‌‌ನ್ನೇ ನೀಡುವುದಿಲ್ಲ.

ಚೆಕ್ ಕ್ಲಿಯರೆನ್ಸ್:
ಬ್ಯಾಂಕುಗಳ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆಯಲ್ಲಿ ವಂಚನೆಯಾಗುತ್ತಿದ್ದು ಅದನ್ನು ತಡೆಯುವ ಉದ್ದೇಶದಿಂದ ರಿಸರ್ವ್ ಬ್ಯಾಂಕು ಇದರ ಪೊಸಿಟಿವ್ ಪೇಸಿಸ್ಟಂ ಜನವರಿ ಒಂದರಿಂದ ಜಾರಿಗೆ ತರಲಾಗಿತ್ತು. ಹೆಚ್ಚಿನ ಬ್ಯಾಂಕುಗಳು ಈಗಾಗಲೇ ಇದನ್ನು ಜಾರಿಗೆ ತಂದಿವೆ. ಆಕ್ಸಿಸ್ ಬ್ಯಾಂಕು ಸೆಪ್ಟಂಬರ್ ಒಂದರಿಂದ ಜಾರಿಗೆ ತರುತ್ತಿದ್ದು ದೊಡ್ಡ ಮೊತ್ತದ ಚೆಕ್ ಇಶ್ಯು ಮಾಡುವ ವ್ಯಕ್ತಿಗಳು ಬ್ಯಾಂಕಿಗೆ ಮುಂಚಿತವಾಗಿ ತಿಳಿಸಬೇಕೆನ್ನುವುದು ಇದರಡಿಯಲ್ಲಿ ಬರುವ ನಿರ್ದೇಶವಾಗಿದೆ.