ಇಸ್ರೇಲ್: ಡೆಲ್ಟಾ ವೈರಸ್ ಮತ್ತಷ್ಟು ಹೆಚ್ಚಳದ ಮಧ್ಯೆಯೇ ಶಾಲಾ-ಕಾಲೇಜು ಆರಂಭಿಸಲು ಸಿದ್ಧತೆ

0
428

ಸನ್ಮಾರ್ಗ ವಾರ್ತೆ

ಟೆಲ್ ಅವೀವ್: ಇಸ್ರೇಲ್ ಗೆ ಡೆಲ್ಟಾ ವೈರಸ್ ಪ್ರಭೇದವು ದಾಳಿ ಇಟ್ಟಿರುವುದಾಗಿ ಭೀತಿ ಪಡಲಾಗಿದೆ. ಒಂದೇ ದಿನದಲ್ಲಿ 11, 000 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಒಂದು ದಿನದಲ್ಲಿ ಇದು ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಎಂದು ಹೇಳಲಾಗಿದೆ. ಈ ನಡುವೆ ಶಾಲಾ ಕಾಲೇಜುಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಿರುವುದರ ನಡುವೆಯೇ ಈ ಭೀತಿ ಎದುರಾಗಿದೆ.

ಕಳೆದ ಜನವರಿ 18ರಂದು 10,118 ಕೊರೋನಾ ಪಾಸಿಟಿವ್ ಪ್ರಕರಣ ಒಂದೇ ದಿನದಲ್ಲಿ ದಾಖಲಾಗಿದ್ದು ಇದುವರೆಗಿನ ಅತ್ಯಧಿಕ ಪಾಸಿಟಿವ್ ಪ್ರಕರಣವಾಗಿತ್ತು. ಹೀಗಿದ್ದೂ ಸೆಪ್ಟೆಂಬರ್ ಒಂದರಿಂದ ಶಾಲಾ ಕಾಲೇಜುಗಳನ್ನು ತೆರೆಯಲು ಇಸ್ರೇಲ್ ಮುಂದಾಗಿದೆ.

ಇಸ್ರೇಲ್ ನ 9.3 ಮಿಲಿಯನ್ ನಾಗರಿಕರ ಪೈಕಿ 60 ಶೇಕಡಾ ಮಂದಿ ಎರಡು ಡೋಸ್ ಫೈಝರ್ ವ್ಯಾಕ್ಸಿನ್ ಪಡೆದಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಇಸ್ರೇಲ್ ಸರಕಾರ ರಾಷ್ಟ್ರಾದ್ಯಂತ ಕೊರೋನಾ ವ್ಯಾಕ್ಸಿನ್ ಅಭಿಯಾನವನ್ನು ಹಮ್ಮಿಕೊಂಡಿತ್ತು.