ಅಧಿಕಾರದಲ್ಲಿದ್ದಾಗ ಲಭಿಸಿದ ಉಡುಗೊರೆಗಳನ್ನು ಮರಳಿಸುವಂತೆ ನೆತನ್ಯಾಹು‌ಗೆ ಸೂಚನೆ ನೀಡಿದ ಇಸ್ರೇಲ್ ಸರಕಾರ

0
497

ಸನ್ಮಾರ್ಗ ವಾರ್ತೆ

ಜೆರುಸಲೇಮ್: ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕಾರದಲ್ಲಿರುವಾಗ ಬೆಲೆ ಬಾಳುವ ಸಮ್ಮಾನಗಳನ್ನು ಪಡೆದುಕೊಂಡಿದ್ದಾರೆ ಅದನ್ನು ಮರಳಿಸಬೇಕೆಂದು ಇಸ್ರೇಲ್ ಸರಕಾರ ಹೇಳಿದೆ. ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ರಷ್ಯದ ಅಧ್ಯಕ್ಷ ಪುತಿನ್ ಸಹಿತ ಅವರು 42ರಷ್ಟು ಸಮ್ಮಾನಗಳನ್ನು ಸ್ವೀಕರಿಸಿದ್ದು ಅದನ್ನು ಇಸ್ರೇಲಿನ ಪ್ರಧಾನಿ ಕಚೇರಿಗೆ ಕೊಡಬೇಕೆಂದು ನೆತನ್ಯಾಹುಗೆ ಸರಕಾರ ಆಗ್ರಹಿಸಿದೆ.

ಸಂದರ್ಶನಕ್ಕೆ ಹೋದರೆ ವಿದೇಶಿ ಮುಖ್ಯಸ್ಥರು ಉಡುಗೊರೆ ಕೊಡುವುದು ರೂಢಿ. 90 ಡಾಲರ್‌ಗಿಂತ ಹೆಚ್ಚು ಬೆಲೆಯ ಸಮಾನುಗಳು ಇಸ್ರೇಲ್ ಸರಕಾರದ ಆಸ್ತಿಯಾಗಿದೆ. ಆಡಳಿತ ಕಾಲದಲ್ಲಿಸಿಕ್ಕಿದ ಬೆಲೆಬಾಳುವ ಉಡುಗೊರೆಗಳನ್ನು ನೆತನ್ಯಾಹು ಮತ್ತು ಅವರ ಪತ್ನಿ ಸರಕಾರಕ್ಕೆ ಒಪ್ಪಿಸಿಲ್ಲ. ಪೋಪ್ ಪ್ರಾನ್ಸಿಸ್, ಜರ್ಮನ್, ಫ್ರೆಂಚ್ ನಾಯಕರು ನೆತನ್ಯಾಹುಗೆ ಉಡುಗೊರೆ ಕೊಟ್ಟಿದ್ದಾರೆ.