ದಿಲ್ಲಿ, ಉತ್ತರ ಪ್ರದೇಶಗಳಲ್ಲಿ ಶಾಲಾರಂಭ

0
372

ಸನ್ಮಾರ್ಗ ವಾರ್ತೆ

ಲಕ್ನೊ: ದಿಲ್ಲಿ ಮತ್ತು ಉತ್ತರಪ್ರದೇಶದಲ್ಲಿ ಕೊರೋನ ಮಾನದಂಡ ಪಾಲಿಸಿ ಶಾಲೆಗಳು ತೆರೆದಿವೆ. ದಿಲ್ಲಿಯಲ್ಲಿ ಒಂಬತ್ತರಿಂದ ಹನ್ನೆರಡು ತರಗತಿ ವಿದ್ಯಾರ್ಥಿಗಳಿಗೆ, ಉತ್ತರಪ್ರದೇಶದಲ್ಲಿ ಒಂದರಿಂದ ಐದನೇಯ ಕ್ಲಾಸಿನವರೆಗಿನ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಶಾಲೆ ಆರಂಭವಾಗಿದ್ದು ಮಕ್ಕಳು ಶಾಲೆಗೆ ಬಂದಿದ್ದಾರೆ.

ಪೂರ್ಣವಾಗಿ ಕೊರೋನ ಮಾನದಂಡವನ್ನು ಪಾಲಿಸಿ ವಿದ್ಯಾರ್ಥಿಗಳು ಕ್ಲಾಸಿಗೆ ಕರೆತರಲಾಗುತ್ತಿದೆ. ಮುಂದಿನ ಹಂತದಲ್ಲಿ ಬೇರೆ ತರಗತಿಗಳ ವಿದ್ಯಾರ್ಥಿಗಳನ್ನು ಶಾಲೆಗೆ ತರಲಾಗುವುದು. ದಿಲ್ಲಿಯಲ್ಲಿ ಆರರಿಂದ ಎಂಟರವರೆಗಿನ ತರಗತಿಗಳು ಸೆ. 8ರಿಂದ ತೆರೆಯಲಿದೆ.

ಕೊರೋನ ಹರಡಿ ಕಾರಣದಿಂದಾಗಿ ಒಂದೂವರೆವರ್ಷ ಶಾಲಾ ತರಗತಿಗಳನ್ನು ನಿರ್ಬಂಧಿಸಲಾಗಿತ್ತು. ಈಗ ಶಾಲೆಗಳು ಹಂತ ಹಂತವಾಗಿ ತೆರೆಯಲ್ಪಡುತ್ತಿದ್ದು ಮಕ್ಕಳಲ್ಲಿ ಶಾಲೆಯತ್ತ ಉತ್ಸುಕರಾಗಿದ್ದಾರೆ. ಸಂಗಡಿಗರು, ಗೆಳೆಯರನ್ನು ನೋಡಿದ ಖುಷಿಯು ಮಕ್ಕಳ ಮೊಗದಲ್ಲಿತ್ತು. ಎಲ್ಲರ ಮುಖದಲ್ಲಿ ಆಚ್ಚರಿಯಿತ್ತು ಎಂದು ಲಕ್ನೊದ ಸಿಟಿ ಮೊಂಟಸರಿ ಶಾಲೆಯ ಪ್ರಿನ್ಸಿಪಾಲ್ ದಿಪಾಲಿ ಗೌತಮ್ ಹೇಳಿದರು.