ವಿಯೆಟ್ನಾಂ‌ನಲ್ಲಿ ಲಾಕ್‌ಡೌನ್: ಜಾಗತಿಕ ಕಾಫಿ ಪೂರೈಕೆಯ ಕುರಿತು ಹೆಚ್ಚಿದ ಕಳವಳ

0
295

ಸನ್ಮಾರ್ಗ ವಾರ್ತೆ

ಹನೋಯ್: ಕೊರೋನ ಪ್ರಕರಣ ಹಠಾತ್ ಹೆಚ್ಚಿದ ಕಾರಣ ವಿಯೆಟ್ನಾಮಿನಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಹಲವು ದೇಶಗಳಿಗೆ ಅಲ್ಲಿಂದ ರಫ್ತಾಗುತ್ತಿದ್ದ ಕಾಫಿ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದೆ‌. ಹೊಚಿಮಿನ್ ಸಿಟಿ ಬಂದರು ಮುಚ್ಚಲಾಗಿದ್ದು, ಕಾಫಿ ಉತ್ಪಾದನೆಯ ಪ್ರದೇಶಗಳಲ್ಲಿಯೂ ಲಾಕ್‌ಡೌನ್‌ ಹೇರಲಾಗಿದೆ. ಇದರೊಂದಿಗೆ ಕಾಫಿ ರಫ್ತು ಸ್ಥಗಿತವಾಗಿದೆ.

ಕಾಫಿ ರಪ್ತಿನಲ್ಲಿ ಶೇ.20ರಷ್ಟು ವಿಯೆಟ್ನಾಮಿನ ಪಾಲಿದೆ. ಬ್ರೆಝಿಲ್‍ನಲ್ಲಿ ಹವಾಮಾನ ವೈಪರೀತ್ಯವಾದ್ದರಿಂದ ಅಲ್ಲಿಂದ ಕಾಫಿ ಬರುವುದು ನಿಂತಿದೆ. ವಿಯೆಟ್ನಾಮ್ ಕಾಫಿ‌ಗೆ ಪ್ರಸಿದ್ಧವಾಗಿದೆ. ಅಲ್ಲಿ ರಾಬಸ್ಟ್, ಎಸ್‍ಪ್ರೊ, ಇನ್ಸ್‌ಟೆಂಟ್ ಕಾಫಿಗಳು ಜನಪ್ರಿಯವಾಗಿವೆ. ಕೊರೋನದಿಂದ ವಿಯೆಟ್ನಾಂ ಕಾಫಿ ಕೆಲಸ ನಿಲ್ಲಿಸಿದ್ದರಿಂದ ಅಲ್ಲಿನ ಕಾಫಿಗೆ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಏರಿಕೆಯಾಗಿದೆ. ಸೋಮವಾರ ವಿಯೆಟ್ನಾಂನಲ್ಲಿ 14,219 ಮಂದಿಗೆ ಕೊರೋನ ದೃಢಪಟ್ಟಿತ್ತು.