ಉತ್ತರಪ್ರದೇಶದ ಬಳಿಕ ಆಂಧ್ರದಲ್ಲಿ ವೈರಲ್ ಜ್ವರ ಭೀತಿ: 9 ವರ್ಷದ ಬಾಲಕಿ ಮೃತ

0
473

ಸನ್ಮಾರ್ಗ ವಾರ್ತೆ

ಕರ್ನೂಲು: ಉತ್ತರಪ್ರದೇಶದ ಬಳಿಕ ಈಗ ಆಂಧ್ರದ ವಿವಿಧ ಕಡೆಗಳಲ್ಲಿ ಅಂಟು ಜ್ವರ ಹರಡುತ್ತಿದ್ದು ಡೆಂಗ್ಯೂ ಜ್ವರದ ಲಕ್ಷಣಗಳಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋದ ಒಂಬತ್ತು ವರ್ಷದ ಬಾಲಕಿ ಕಳೆದ ದಿವಸ ರೋಗದಿಂದಾಗಿ ಮೃತಪಟ್ಟಿದ್ದಾಳೆ.

ಇದೇ ಲಕ್ಷಣಗಳಿದ್ದ ಹತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಇವರು ಓಕ್ ಮಂಡಲದ ಸಿಂಗನಪಳ್ಳಿ ಗ್ರಾಮದವರು. ಎಲ್ಲರನ್ನೂ ಕರ್ನೂಲು ಮತ್ತು ಹೈದರಾಬಾದಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿಕೊಳ್ಳಲಾಗಿದೆ.

ಕಳೆದ ಎರಡು ದಿವಸಗಳಲ್ಲಿ ಆರು ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದ್ದು ಜಿಲ್ಲೆಯಲ್ಲಿ ಜನವರಿ ಒಂದರಿಂದ 49 ಡೆಂಗ್ಯೂ ಪ್ರಕರಣಗಳು ದೃಢಗೊಂಡಿದೆ. ಇದರಲ್ಲಿ 736 ಪ್ರಕರಣಗಳು ಶಂಕಿತ ಎಂದು ವರದಿಯಾಗಿತ್ತು. ಕಳೆದ ವರ್ಷ 16 ಡೆಂಗ್ಯೂ ಜ್ವರ ಪ್ರಕರಣಗಳು ಜಿಲ್ಲೆಯಲ್ಲಾಗಿತ್ತು ಎಂದು ವರದಿ ಆಗಿದೆ. ಈ ವರ್ಷ ಜಿಲೆಯಲ್ಲಿ ಒಂದು ಸಾವು ಸಂಭವಿಸಿದ ವರದಿ ಬಂದಿದೆ ಎಂದು ಅಧಿಕಾರಿಗಳು ಹೇಳಿದರು.

ವೈರಲ್ ಜ್ವರ ಬಾಧಿಸಿದವರಲ್ಲಿ ಡೆಂಗ್ಯೂ, ಚಿಕುನ್ ಗುನ್ಯಾ, ಮಲೇರಿಯದ ಲಕ್ಷಣಗಳು ಇವೆ. ಕುಡಿಯುವ ನೀರಿನಿಂದ ರೋಗ ಹರಡಿದ್ದು ಮತ್ತು ನದೀ ತೀರದ ನಿವಾಸಿಗಳು ಎಚ್ಚರವಹಿಸಬೇಕೆಂದು ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದರು. ಇದೇವೇಳೆ, ಉತ್ತರಪ್ರದೇಶದ ಪಿರೋಝಬಾದಿನಲ್ಲಿ ಡೆಂಗ್ಯೂ ಜ್ವರದಿಂದ ಹಲವು ಮಕ್ಕಳು ಮೃತಪಟ್ಟಿದ್ದು ವರದಿಯಾಗಿದ್ದು 45 ಮಕ್ಕಳು ಮೃತಪಟ್ಟಿದ್ದಾರೆನ್ನಲಾಗಿದೆ.