ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಮೋಹನ್ ಭಾಗವತ್ – ಮಾಜಿ ಸಿಜೆಐ ಬೊಬ್ಡೆ ಭೇಟಿ

0
518

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಎಸ್.ಎ ಬೊಬ್ಡೆಯವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‍ರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ನಾಗಪುರದ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ಇಬ್ಬರ ಭೇಟಿ ನಡೆಯಿತು. ಆದರೆ ಆರೆಸ್ಸೆಸ್ ಈ ವರದಿಯನ್ನು ನಿರಾಕರಿಸಿದೆ. ಆದರೆ ಭೇಟಿಯನ್ನು ವಿಶ್ವಾಸನೀಯ ಮೂಲಗಳು ದೃಢೀಕರಿಸಿದೆ ಎಂಬುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮಂಗಳವಾರ ಸಂಜೆ ನಾಲ್ಕು ಮತ್ತು ಐದು ಗಂಟೆಯ ನಡುವೆ ಇಬ್ಬರ ಭೇಟಿ ನಡೆದಿದೆ. ಆರ್‌ಎಸ್‌ಎಸ್ ಸಂಸ್ಥಾಪಕ ಹೆಗಡೆವಾರರ ಪೂರ್ವಿಕರ ಮನೆಗೆ ಬೋಬ್ಡೆ ಹೋಗಿದ್ದಾರೆ ಎಂದು ವರದಿ ತಿಳಿಸಿದೆ. ಬೊಬ್ಡೆ ಮೂಲತಃ ನಾಗಪುರದವರು. ಇಲ್ಲಿಯೇ ಅವರು ಕಾನೂನು ಪ್ರಾಕ್ಟಿಸ್ ಮಾಡುತ್ತಿದ್ದರು. ಅಧಿಕೃತ ಸ್ಥಾನಕ್ಕೆ ಬರುವ ಮೊದಲು ದಿಲ್ಲಿ ನಾಗಪುರದಲ್ಲಿ ವಾಸವಿದ್ದರು. ಚೀಫ್ ಜಸ್ಟಿಸ್ ಆಗಿರುವಾಗ ನಾಗಪುರದ ಬಿಜೆಪಿ ನಾಯಕನ ಮಗನ ಅದ್ದೂರಿ ಬೈಕಿನಲ್ಲಿ ಕೂತ ಬೊಬ್ಡೆ ಫೋಟೊ ತೆಗೆಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ವರ್ಷ ಮಾರ್ಚ್‌ನಲ್ಲಿ ಬಿಜೆಪಿಯ ಪ್ರಧಾನ ಭರವಸೆ ಏಕೀಕೃತ ನಾಗರಿಕ ಕೋಡ್‌ಅನ್ನು ಬೊಬ್ಡೆ ಹೊಗಳುವ ಮೂಲಕ ಸುದ್ದಿಯಲ್ಲಿದ್ದರು.