‘ಖೇಲ್ ರತ್ನ’ದ ಬಳಿಕ ಅಸ್ಸಾಮ್ ರಾಷ್ಟ್ರೀಯ ಉದ್ಯಾನದಿಂದ ರಾಜೀವ್ ಗಾಂಧಿ ಹೆಸರು ತೆಗೆದು ಹಾಕಲು ಪ್ರಸ್ತಾವ

0
594

ಸನ್ಮಾರ್ಗ ವಾರ್ತೆ

ಗುವಾಹಟಿ: ದೇಶದ ಪರಮೋಚ್ಚ ಕ್ರೀಢಾ ಪ್ರಶಸ್ತಿ ಖೇಲ್ ರತ್ನದ ನಂತರ ಈಗ ಅಸ್ಸಾಮಿನ ರಾಷ್ಟ್ರೀಯ ಉದ್ಯಾನದಿಂದ ಮಾಜಿ ಪ್ರಧಾನಿ ರಾಜೀವ್ ಗಾಂದಿಯವರ ಹೆಸರು ತೆಗೆದು ಹಾಕಲು ನಿರ್ಧರಿಸಲಾಗಿದೆ. ಇದನ್ನು ‘ಓರಂಗ್ ರಾಷ್ಟ್ರೀಯ ಉದ್ಯಾನವನ’ ಎಂಬುದಾಗಿ ನಾಮಕರಣ ಮಾಡಲು ಅಸ್ಸಾಂ ಸರಕಾರ ಪ್ರಸ್ತಾವ ಪಾಸು ಮಾಡಿದೆ.

ಓರಂಗ್ ರಾಷ್ಟ್ರೀಯ ಉದ್ಯಾನವನ್ನು ರಾಜೀವ್ ಗಾಂದಿ ರಾಷ್ಟ್ರೀಯ ಉದ್ಯಾನವೆಂದು ಚಿರಪರಿಚಿತವಾಗುತ್ತಿತ್ತು. ಆದರೆ ಈಗ ಸರಕಾರ ರಾಜೀವ್ ಗಾಂಧಿಯವರ ಹೆಸರನ್ನು ಅಧಿಕೃತವಾಗಿ ತೆಗೆದು ಹಾಕಿದೆ.
ರಾಷ್ಟ್ರೀಯ ಉದ್ಯಾನದ ಹೆಸರನ್ನು ಬದಲಿಸಬೇಕೆಂದು ಹಲವು ಸಂಘಟನೆಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಹೆಸರು ತೆಗೆದು ಹಾಕಲಾಗಿದೆ ಎಂದು ರಾಜ್ಯ ಸರಕಾರ ಸ್ಪಷ್ಟೀಕರಣ ನೀಡಿದೆ.

ಆದಿವಾಸಿಗಳು, ಚಾ ತೋಟ ಕಾರ್ಮಿಕರು, ಗೋತ್ರಗಳ ಬೇಡಿಕೆಯನ್ನು ಒಪ್ಪಿಕೊಂಡು ರಾಜೀವ ಗಾಂಧಿ ಉದ್ಯಾನವನ್ನು ರಾಷ್ಟ್ರೀಯ ಉದ್ಯಾನವನವೆಂದು ಸರಕಾರ ತೀರ್ಮಾನಿಸಿತೆಂದು ಸರಕಾರದ ಹೇಳಿಕೆ ತಿಳಿಸಿದೆ.

ಬ್ರಹ್ಮಪುತ್ರ ನದಿಯ ಉತ್ತರ ತೀರದಲ್ಲಿ ದಾರಾಂಗ್, ಉದಲ್ ಪುರಿ ಸೋನಿಪುರ್ ಜಿಲ್ಲೆಗಳಲ್ಲಿ ರಾಷ್ಟ್ರೀಯ ಉದ್ಯಾನ ಹರಡಿಕೊಂಡಿದ್ದು ಇಂಡಿಯನ್ ರೈನೋಸ್, ಕಾಡು ಹಂದಿ, ಬೆಂಗಾಲ್ ಟೈಗರ್ಸ್ , ಕಾಡಾನೆ, ಕಾಡೆಮ್ಮ ಮುಂತಾದುದಕ್ಕೆ ಈ ಉದ್ಯಾನ ಪ್ರಸಿದ್ಧವಾಗಿದೆ. 79.28ಚದರ ಕಿಲೊಮೀಟರ್ ವಿಸ್ತೀರ್ಣವಿದೆ. 1985ರಲ್ಲಿ ರಾಜೀವ್ ಗಾಂಧಿ ಇದನ್ನು ವನ್ಯಜಿವಿ ಆಶ್ರಯ ತಾಣವೆಂದು ಘೋಷಿಸಿದ್ದರು ಇದು 1999ರಲ್ಲಿ ರಾಷ್ಟ್ರೀಯ ಉದ್ಯಾನವಾಗಿತ್ತು.