ಅಫ್ಘಾನ್ ಮರುನಿರ್ಮಾಣದಲ್ಲಿ ಚೀನಾ ಸಹಾಯ ಮಾಡಲಿದೆ- ತಾಲಿಬಾನ್ ಹೇಳಿಕೆ

0
749

ಸನ್ಮಾರ್ಗ ವಾರ್ತೆ

ರೋಮ್: ಚೀನ ತಮ್ಮ ಮುಖ್ಯ ಪಾಲುದಾರ ಮತ್ತು ಅಫ್ಘಾನಿಸ್ತಾನದ ಮರುನಿರ್ಮಾಣದಲ್ಲಿ ಅದು ಕೈಜೋಡಿಸಲಿದೆ ಎಂದು ತಾಲಿಬಾನ್ ವಕ್ತಾರ ಸಬೀಹುಲ್ಲಾಹ್ ಮುಜಾಹಿದ್ ಹೇಳಿದರು. ದೇಶದಲ್ಲಿ ಅದು ಹೂಡಿಕೆ ನಡೆಸಲಿದೆ. ಪುನರ್‌ನಿರ್ಮಾಣ ಕಾರ್ಯಕ್ಕೆ ಬೆಂಬಲಿಸಲಿದೆ ಎಂದು ಇಟಲಿಯ ಪತ್ರಿಕೆ ಲಾ ರಿಪಬ್ಲಿಕ್‍ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ಪ್ರಾಚೀನವಾದ ಬೆಲ್ಟ್ ಆಂಡ್ ರೋಡ್ ಯೋಜನೆಗೆ ಸಹಕರಿಸಲಿದೆ. ಚೀನದ ದೂತವಾಸ ಅಫ್ಘಾನಿಸ್ತಾನದಲ್ಲಿರುತ್ತದೆ ಎಂದು ತಾಲಿಬಾನ್ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ತಾಮ್ರ ಇದ್ದು ಅದನ್ನು ಸಂಪೂರ್ಣ ಉಪಯೋಗಿಸಿ ಅಂತಾರಾಷ್ಟ್ರೀಯ ಮಾರಕಟ್ಟೆಗೆ ದಾರಿ ಮಾಡಿಕೊಡಲು ಚೀನ ನೆರವಾಗಲಿದೆ ಎಂದು ಅವರು ಹೇಳಿದರು. ಜೊತೆಗೆ ರಷ್ಯದೊಂದಿಗೂ ಉತ್ತಮ ಸಂಬಂಧ ಕುದುರಿಸಲು ಶ್ರಮಿಸಲಾಗುವುದು ಎಂದು ಅವರು ಹೇಳಿದರು.

ಈಗ ವಿಮಾನ ನಿಲ್ದಾಣ ತಾಲಿಬಾನ್ ಕೈಯಲ್ಲಿದೆ. ವಿಮಾನ ನಿಲ್ದಾಣದಲ್ಲಿ ಆಗಿರುವ ಹಾನಿಯನ್ನು ಎರಡು ಮೂರು ದಿವಸಗಳಲ್ಲಿ ಸರಿಪಡಿಸಿ ಸಜ್ಜುಗೊಳಿಸಲಾಗುವುದು ಎಂದು ಅವರು ಹೇಳಿದರು. ತಾಲಿಬಾನ್ ನಿಯಂತ್ರಣಕ್ಕೆ ಇನ್ನೂ ಬರದ ಪಂಚಶೀರ್ ಪ್ರಾಂತ್ಯದಲ್ಲಿ ಬಲವಾದ ಹೋರಾಟ ನಡೆಯುತ್ತಿದೆ. ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂದೆ ಸರಿದುದರ ನಂತರ ತಾಲಿಬಾನ್ ಪಂಚಶೀರ್‌ನಲ್ಲಿ ದಾಳಿ ಆರಂಬಿಸಿದೆ. ದಾಳಿಯಲ್ಲಿ ಹಲವಾರು ತಾಲಿಬಾನ್ ಸೈನಿಕರನ್ನು ಹತ್ಯೆಮಾಡಿದುದಾಗಿ ಉತ್ತರದ ಸಖ್ಯ ತಿಳಿಸಿದೆ. ಪಂಚಶೀರ್ ಬೆಟ್ಟ ಸಾಲುಗಳನ್ನು ವಶಪಡಿಸುವ ಕ್ರಮದಲ್ಲಿ ತಾಲಿಬಾನ್ ನ್ಯಾಷನಲ್ ರೇಸಿಸ್ಟೆಂಟ್ ಫ್ರಂಟ್ ಬಲವಾದ ಹೋರಾಟ ನಡೆಸುತ್ತಿದೆ.