ಕೇರಳದ ಪ್ರಥಮ ಪಿಯುಸಿ ಪರೀಕ್ಷೆಗೆ ಸುಪ್ರೀಂ ಕೋರ್ಟಿನಿಂದ ಒಂದು ವಾರ ತಡೆಯಾಜ್ಞೆ

0
478

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸೋಮವಾರದಿಂದ ಕೇರಳದಲ್ಲಿ ನಡೆಯಬೇಕಿದ್ದ ಪ್ರಥಮ ಪಿಯುಸಿ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಒಂದು ವಾರ ತಡೆಯಾಜ್ಞೆ ವಿಧಿಸಿದೆ. ಕೇರಳದಲ್ಲಿ ಕೊರೋನ ಅಪಾಯಕಾರಿಯಾಗಿರುವುದನ್ನು ಹೇಳಿದ ಜಸ್ಟಿಸ್ ಎ.ಎನ್.ಖಾನ್ವಿಲ್ಕರ್ ಅಧ್ಯಕ್ಷತೆಯ ಪೀಠವು ಪರೀಕ್ಷೆ ನಡೆಸುವ ತೀರ್ಮಾನಕ್ಕೆ ತಡೆಯಾಜ್ಞೆ ನೀಡಿತು.

ಸೆಪ್ಟಂಬರ್ ಐದರಿಂದ ಪರೀಕ್ಷೆ ಆರಂಭಿಸಲು ಸರಕಾರ ಸಿದ್ಧತೆ ನಡೆಸಿತ್ತು. ಇದೇವೇಳೆ ಸುಪ್ರೀಂ ಕೋರ್ಟು ತಡೆಯಾಜ್ಞೆ ನೀಡಿದೆ. ಸೆ.13ರವರೆಗೆ ಪರೀಕ್ಷೆ ಮಾಡಬಾರದೆಂದು ಹೇಳಿದೆ. ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೇರಳ ಸರಕಾರ ಯಶಸ್ವಿಯಾಗಿ ಮಾಡಿತ್ತು. ಆದರೆ ಕೋರ್ಟು ಕೊರೋನ ಪರಿಸ್ಥಿತಿಯತ್ತ ಬೆಟ್ಟು ಮಾಡಿ ತಡೆಯಾಜ್ಞೆ ನೀಡಿದೆ. ಪರೀಕ್ಷೆಯ ಕುರಿತು ಹೊಸ ಮಾರ್ಗ ಸೂಚಿಯನ್ನು ಒಂದು ವಾರದೊಳಗೆ ಪ್ರಕಟಿಸುವುದಾಗಿ ಸರಕಾರ ಕೋರ್ಟಿಗೆ ಹೇಳಿದೆ.