ಆರೆಸ್ಸೆಸ್ ತಾಲಿಬಾನಿನಂತೆ ಎಂದ ಜಾವೇದ್ ಅಕ್ತರ್: ಈ ರೀತಿ ಹೋಲಿಕೆ ಸರಿಯಲ್ಲ ಎಂದ ಶಿವಸೇನೆ

0
564

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಆರೆಸ್ಸೆಸ್, ವಿಎಚ್‍ಪಿಗಳನ್ನು ತಾಲಿಬಾನಿಗೆ ಹೋಲಿಸಿದ ಘಟನೆಯಲ್ಲಿ ಸಿನೆಮಾ ಸಾಹಿತಿ ಜಾವೇದ್ ಅಕ್ತರ್ ರವರನ್ನು ಶಿವಸೇನೆ ಟೀಕಿಸಿದ್ದು, ಭಾರತದ ಯಾವುದೇ ಸಂಘಟನೆಯನ್ನು ತಾಲಿಬಾನಿಗೆ ಹೋಲಿಸುವುದು ಖಂಡನೀಯ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ತಾಲಿಬಾನ್ ಒರಟರು, ಅವರ ಚಟುವಟಿಕೆಗಳು ಖಂಡನೀಯ. ಆದರೆ ಆರೆಸ್ಸೆಸ್, ವಿಎಚ್‍ಪಿ, ಭಜರಂಗದಳವನ್ನು ಬೆಂಬಲಿಸುವವರು ಒಂದೇ ಎಂದು ಎನ್‍ಡಿಟಿವಿ ಸುದ್ದಿಸಂಸ್ಥೆಯ ಸಂದರ್ಶನದ ವೇಳೆ ಜಾವೇದ್ ಅಕ್ತರ್ ಹೇಳಿಕೆ ನೀಡಿದ್ದರು.

ನಾವು ಸಾಮ್ನಾದಲ್ಲಿ ಈ ವಿಷಯವನ್ನು ಬರೆದಿದ್ದು, ತಾಲಿಬಾನಿನೊಂದಿಗೆ ಯಾವುದೇ ಭಾರತೀಯ ಸಂಘಟನೆಯನ್ನು ಹೋಲಿಸುವುದು ಖಂಡನೀಯವಾಗಿದೆ. ಇದು ಒಂದು ಪ್ರಜಾಪ್ರಭುತ್ವ ದೇಶ. ತಾಲಿಬಾನ್ ವಿಕೃತ ಮನಸ್ಥಿತಿ ಇಲ್ಲಿ ಎಂದೂ ಒಪ್ಪಲು ಸಾಧ್ಯವಿಲ್ಲ. ಇಲ್ಲಿನ ಜನರು ಹೋರಾಡುತ್ತಾರೆ. ಪ್ರತಿರೋಧಿಸುತ್ತಾರೆ. ನಮ್ಮ ದೇಶದ ಪ್ರತಿಪಕ್ಷ ಪಾರ್ಟಿಗಳು ತುರ್ತು ಪರಿಸ್ಥಿತಿಯನ್ನು ನೋಡಿವೆ ಎಂದು ಸಂಜಯ್ ರಾವುತ್ ಹೇಳಿದರು.