ಕುವೈಟ್: 3,90,000 ಮಂದಿ ಅನಿವಾಸಿಗಳ ಇಖಾಮ ಅವಧಿ ಮುಕ್ತಾಯ…!

0
962

ಸನ್ಮಾರ್ಗ ವಾರ್ತೆ

ಕುವೈಟ್ ಸಿಟಿ: ಕೋವಿಡ್ ಕಾರಣಕ್ಕೆ ವಿಮಾನಯಾನ ಸೇವೆ ಇಲ್ಲದಿರುವುದರಿಂದ ಊರಿನಲ್ಲಿ ರಜೆ ಹಾಗೂ ಇತರ ಕಾರಣಕ್ಕೆ ಬಂದಿದ್ದ ಸುಮಾರು 3,90,000 ಮಂದಿ ಅನಿವಾಸಿ ಕುವೈಟಿಗರ ಇಖಾಮ ಸಮಯ ಮುಗಿದಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಈ ಪೈಕಿ ಅರಬ್, ಏಷ್ಯನ್ ದೇಶಗಳ ಜನರು ಹೆಚ್ಚು ಇದ್ದಾರೆ ಎಂದು ತಿಳಿದು ಬಂದಿದೆ. ಕೊರೋನಾ ಕಾರಣಕ್ಕೆ ವಿಮಾನ ಇಲ್ಲದೆ ಕುವೈಟ್‍ಗೆ ಹೋಗಲಾಗದೆ ಉಳಿಯಬೇಕಾಗಿ ಬಂದವರು ಊರಲ್ಲೇ ಉಳಿದುಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ನವೀಕರಣ ಆಗದೆ ಇಖಾಮ ನಷ್ಟವಾಗಿದ್ದು ಸರಕಾರ, ಖಾಸಗಿ, ಮನೆಕೆಲಸ, ಕುಟುಂಬ ವೀಸಾ ಸಹಿತ ಎಲ್ಲ ರೀತಿಯ ವೀಸಾಗಳನ್ನು ಗೃಹ ಸಚಿವಾಲಯದ ವೆಬ್‍ಸೈಟಿನಲ್ಲಿ ನವೀಕರಿಸಿಕೊಳ್ಳಬಹುದಾಗಿದೆ. ಸ್ಪೊನ್ಸರ್ ಅಥವಾ ಮನ್ದೂಬಿಗೆ ಇದು ಅನ್ವಯ ಆಗುತ್ತದೆ.

ಸ್ಪೋನ್ಸರ್ ಅಥವಾ ಕಂಪೆನಿ ಆನ್‍ಲೈನ್ ಆಗಿ ನವೀಕರಿಸದ್ದರಿಂದ ಕಂಪೆನಿಯ ದಾಖಲೆಗಳು ಇತ್ಯಾದಿ ಕಾರಣಗಳಿಂದ ಅಥವಾ ನಿರ್ಲಕ್ಷ್ಯದಿಂದಲೋ ಹಲವು ಮಂದಿಗೆ ಇಖಾಮ ಅವಧಿ ಮುಕ್ತಾಯವಾಗಿದೆ. ಆರು ತಿಂಗಳಿನಿಂದ ಹೆಚ್ಚು ಕಾಲ ದೇಶದಿಂದ ಹೊರಗಿರುವವರ ಇಖಾಮ ರದ್ದುಪಡಿಸಲಾತ್ತದೆ. ಇದು ಕುವೈಟ್ ನ ಕಾನೂನಾಗಿದೆ.