ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ವತಿಯಿಂದ ಶಿಕ್ಷಕರ ದಿನಾಚರಣೆ

0
436

ಉಡುಪಿ: ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ವತಿಯಿಂದ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಎಸ್.ನಿಮ್ರಾ ಶಿಫಾ, ಲತೀಫ ರಫಾ ಮತ್ತು ಸುಮಯ್ಯ ಅಶ್ರಫ್ ರನ್ನು ಸನ್ಮಾನಿಸಲಾಯಿತು.

ಅದರೊಂದಿಗೆ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಫ್ಲವರ್ಸ್ ಆಫ್ ಪ್ಯಾರಡೈಸ್ ಮಲ್ಪೆಯ ಶಿಕ್ಷಕಿ ಶಬಾನ ಮತ್ತು ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಕಲಂದರ್ ಶಾಫಿ ಕೆ ಅವರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರೊ.ಅಬ್ದುಲ್ ಅಝೀಜ್ ಅವರು ಶೈಕ್ಷಣಿಕ ರಂಗದಲ್ಲಿ ಶಿಕ್ಷಕರು ವಹಿಸಬೇಕಾದ ಪಾತ್ರದ ಕುರಿತು ವಿವರಿಸಿದರು.

ಐಟಾದ ರಾಜ್ಯಾಧ್ಯಕ್ಷರಾದ ರಝಾ ಮಾನ್ವಿ, ನಿಸಾರ್ ಉಡುಪಿ, ಐಟಾ ಜಿಲ್ಲಾಧ್ಯಕ್ಷರಾದ ಅಸ್ಲಮ್ ಹೈಕಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಿದ್ಧೀಕ್ ಬಾಪ, ಸುರಯ್ಯಾ ಮುನೀರ್, ಶೈಲಾ ಹನೀಫ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಮೀನಾ ನಝೀರ್ ಕಾರ್ಯಕ್ರಮ ನಿರೂಪಿಸಿದರು. ಸುರಯ್ಯಾ ಮುನೀರ್ ಧನ್ಯವಾದ ಸಮರ್ಪಿಸಿದರು.