ಆರ್‌ಎಸ್‌ಎಸ್‌ನ ಮುಸ್ಲಿಂ ವಿರೋಧಿ ಪ್ರಚಾರ ಫೇಸ್‍ಬುಕ್‍ಗೆ ತಿಳಿದಿದೆ ಆದರೆ ತಡೆಯುವುದಿಲ್ಲ: ವಸ್ತು ಸ್ಥಿತಿ ಬಹಿರಂಗಪಡಿಸಿದ ಮಾಜಿ ಉದ್ಯೋಗಸ್ಥೆ

0
1180

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್: ಫೇಸ್‍ಬುಕ್ ಅನ್ನು ಕಂಪಿಸುವಂತೆ ವಿಸಿಲ್ ಬ್ಲೋವರ್ ಪುನಃ ರಂಗಪ್ರವೇಶಿಸಿದ್ದಾರೆ. ಫೇಸ್‍ಬುಕ್‍ನ ಮಾಜಿ ಉದ್ಯೋಗಿ ಫ್ರಾನ್ಸಸ್ ಹಾಗನ್ ಫೇಸ್‍ಬುಕ್ ಕುರಿತು ಅಮೆರಿಕದ ಸೆಕ್ಯುರಿಟಿ ಕಮಿಷನ್‍ಗೆ ದೂರು ಸಲ್ಲಿಸಿದ್ದಾರೆ.

2021 ಮೇ ವರೆಗೆ ಫೇಸ್‍ಬುಕ್‍ನಲ್ಲಿ ಡಾಟಾ ಸೈಯಿಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಫ್ರಾನ್ಸಸ್ ಹಾಗನ್ ಅಮೆರಿಕದ ಪ್ರಮುಖ ಮಾಧ್ಯಮ ಸಿಬಿಎಸ್‍ ನ್ಯೂಸ್‍ಗೆ ನೀಡಿದ ಸಂದರ್ಶನ ಸೋಮವಾರ ಪ್ರಸಾರವಾಗಿದೆ.

ಭಾರತ ಸರಕಾರ ಮತ್ತು ಫೇಸ್‍ಬುಕ್ ನಡುವಿನ ಸಂಬಂಧದ ಕುರಿತು ಹಾಗನ್ ಹಲವು ವಿಚಾರಗಳನ್ನು ಬಹಿರಂಗಕ್ಕೆ ತಂದಿದ್ದರು. ನಿರ್ಣಾಯಕವಾದ ಚುನಾವಣೆ ಸಮಯದಲ್ಲಿ ಹಣ ಕೊಡುವ ಟಯರ್ ಝೀರೊ ವಿಭಾಗದಲ್ಲಿ ಭಾರತವನ್ನು ಹಾಗನ್ ಸೇರಿಸಿದ್ದಾರೆ. ಈ ವಿಭಾಗದಲ್ಲಿ ಅಮರಿಕ ಮತ್ತು ಬ್ರೆಝಿಲ್ ಇದೆ.

ಭಾರತದ ಕಂಟೆಂಟ್‍ಗಳಲ್ಲಿ ಮುಸ್ಲಿಮ್ ವಿರೋಧ ಸಾರವನ್ನು ಪತ್ತೆ ಹಚ್ಚಲಾಗಿದೆ. ಅದು ಆರೆಸ್ಸೆಸ್ ಬೆಂಬಲಿಗ ಗುಂಪು ಪ್ರಚಾರ ಮಾಡುತ್ತದೆ ಎಂದು ಫೇಸ್‍ಬುಕ್‍ಗೆ ಸ್ಪಷ್ಟವಾಗಿ ಗೊತ್ತಿದೆ ಎಂದು ಹೋಗನ್ ಹೇಳಿದರು. ಮುಸ್ಲಿಮರನ್ನು ನಾಯಿ ಹಂದಿಗಳೊಂದಿಗೆ ಹೋಲಿಸಿ ಮಾನವವಿರೋಧಿ ಕಂಟೆಂಟ್‍ಗಳನ್ನು ಪವಿತ್ರ ಕುರ್‌ಆನನ್ನು ನಿಷೇಧಿಸುವುದು ಇದರಲ್ಲಿ ಸೇರಿದೆ. ಆದರೆ ಭಾರತದ ಇಂತಹ ಕಂಟೆಂಟುಗಳನ್ನು ನಿಯಂತ್ರಿಸುವ ತಂತ್ರಜ್ಞಾನ ಫೇಸ್‍ಬುಕ್‍ಗಿಲ್ಲ. ಆದ್ದರಿಂದ ಅವರು ಈ ವಿಷಯದಲ್ಲಿ ವಿಫಲರಾಗಿದ್ದಾರೆ ಎಂದು ಹಾಗನ್ ಆರೋಪಿಸಿದರು. ಬಿಜೆಪಿಯ ಐಟಿ ಸೆಲ್‍ಗಳು ನಕಲಿ ಖಾತೆಗಳ ಕುರಿತು ಹಾಗನ್ ಪರಾಮರ್ಶೆ ನಡೆಸಿದ್ದಾರೆ.