ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್‌ರಿಗೆ ಯುಎಇ ಗೋಲ್ಡನ್ ವೀಸಾ

0
937

ಸನ್ಮಾರ್ಗ ವಾರ್ತೆ

ದುಬೈ: ಭಾರತದ ಗ್ರ್ಯಾಂಡ್ ಮುಫ್ತಿ ಮತ್ತು ಜಾಮಿಯಾ ಮರ್ಕಜ್ ಕುಲಪತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ‌ರವರಿಗೆ ಯುಎಇ ಸರ್ಕಾರವು ಗೋಲ್ಡನ್ ವೀಸಾ ನೀಡಿ ಗೌರವಿಸಿದೆ.

ಭಾರತ ಮತ್ತು ಇತರೆಡೆಗಳಲ್ಲಿ ಕಾಂತಪುರಂ ಮಾಡಿದ ಸಾಮಾಜಿಕ ಮತ್ತು ದತ್ತಿ ಕಾರ್ಯಗಳನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ. ಯುಎಇ ಮತ್ತು ಜಾಮಿಯಾ ಮರ್ಕಜ್ ನಡುವಿನ ಅಂತರರಾಷ್ಟ್ರೀಯ ಸಂಬಂಧ, ಶೈಕ್ಷಣಿಕ ವಿನಿಮಯ ಮತ್ತು ದತ್ತಿ ಚಟುವಟಿಕೆಗಳು ಗೌರವಕ್ಕೆ ಕಾರಣವಾಗಿವೆ.

ಹತ್ತು ವರ್ಷಗಳ ಗೋಲ್ಡನ್ ವೀಸಾವನ್ನು ಯುಎಇ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತ ವ್ಯಕ್ತಿಗಳಿಗೆ ನೀಡುತ್ತಿದೆ. ಶಿಕ್ಷಣ ಮತ್ತು ದತ್ತಿ ಚಟುವಟಿಕೆಗಳಿಗಾಗಿ ಭಾರತದಿಂದ ಗೋಲ್ಡನ್ ವೀಸಾ ಪಡೆದ ಮೊದಲ ವ್ಯಕ್ತಿ ಕಾಂತಪುರಂ ಉಸ್ತಾದ್ ಆಗಿದ್ದಾರೆ.