ಸನ್ಮಾರ್ಗ ವಾರ್ತೆ
ಅರೇಹಳ್ಳಿ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಪ್ರವಾದಿ ಮಹಮ್ಮದ್(ಸ) ಅತ್ಯುತ್ತಮ ಮಾದರಿ ಎಂಬ ಅಭಿಯಾನದ ಪ್ರಯುಕ್ತ ಅರೇಹಳ್ಳಿಯಲ್ಲಿ ಆಯೋಜಿಸಿದಂತಹ ವಿಚಾರಗೋಷ್ಠಿಯು ಹಿರಾ ಸೆಂಟರ್ ನಲ್ಲಿ ನಡೆಯಿತು.
ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿರವರು ಮಾತನಾಡಿ “ಪ್ರವಾದಿ ಮಹಮ್ಮದರು ಮಾನವ ಏಕತೆ ಮಾನವ ಸಹೋದರತೆ ಸಂದೇಶ ಇಡೀ ಜಗತ್ತಿಗೆ ಸಾರಿದರು” ಎಂದರು.
ಈ ವಿಚಾರಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಮುರಳೀಧರ್ ಎಸ್, ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಶಾರಿಬ್ ಫರ್ಹಾನ್, ಲಯನ್ಸ್ ಕ್ಲಬ್ ನ ಅಧ್ಯಕ್ಷ ಸಂತೋಷ್ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಝುಬೇರ್ ಅಹ್ಮದ್ ರವರ ಕುರ್-ಆನ್ ಪಠಣದೊಂದಿಗೆ ಈ ಕಾರ್ಯಕ್ರಮವು ಆರಂಭಗೊಂಡಿತು. ಝೈದ್ ರವರು ಪ್ರವಾದಿ ಮುಹಮ್ಮದ(ಸ) ಕುರಿತು ಗೀತೆಯನ್ನು ಪ್ರಸ್ತುತಪಡಿಸಿದರು. ಮುಜೀಬುರ್ರಹ್ಮಾನ್ ಸ್ಥಾನೀಯ ಜಮಾತಿನ ಅಧ್ಯಕ್ಷರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಅತೀಖುಲ್ಲಾ ಕಾರ್ಯಕ್ರಮ ನಿರೂಪಿಸಿದರು ಮತ್ತು ತಬ್ರೇಝ್ ಹುಸೈನ್ ರವರು ಅತಿಥಿಗಳಿಗೆ ಉಡುಗೊರೆ ನೀಡುವ ಕಾರ್ಯವನ್ನು ನೆರವೇರಿಸಿ ಧನ್ಯವಾದವಿತ್ತರು.













