ಇಂಕ್‌ಡಬ್ಬಿ ಆನ್‌ಲೈನ್ ಮಾಧ್ಯಮದ ವತಿಯಿಂದ ರಾಜ್ಯ ಮಟ್ಟದ ಲೇಖನ ಸ್ಪರ್ಧೆ

0
1281

ಸನ್ಮಾರ್ಗ ವಾರ್ತೆ

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ “ಇಂಕ್ ಡಬ್ಬಿ” ಆನ್ಲೈನ್ ಮಾಧ್ಯಮದ ವತಿಯಿಂದ “ಭಾರತದ ಸಂವಿಧಾನ, ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದಲ್ಲಿ ಪ್ರಸ್ತುತ ವಿದ್ಯಾರ್ಥಿ-ಯುವಜನರ ಕರ್ತವ್ಯ” ಎಂಬ ವಿಷಯದಲ್ಲಿ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ‌. ‘ಇಂಕ್ ‌ಡಬ್ಬಿ’ ವಿದ್ಯಾರ್ಥಿ-ಯುವಜನರೆ ನಡೆಸುವ ಆನ್ಲೈನ್ ಮಾಧ್ಯಮವಾಗಿದ್ದು ಪ್ರಮುಖವಾಗಿ ವಿದ್ಯಾರ್ಥಿ-ಯುವಜನರ ಅಭಿವ್ಯಕ್ತಿ, ಆಲೋಚನೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

ಪ್ರಥಮ ಬಹುಮಾನ 10,000 ರೂಪಾಯಿ ಮತ್ತು ಪ್ರಮಾಣ ಪತ್ರ,
ದ್ವಿತೀಯ ಬಹುಮಾನ 5,000 ರೂಪಾಯಿ ಮತ್ತು ಪ್ರಮಾಣ ಪತ್ರ,
ತೃತೀಯ ಬಹುಮಾನ 3,000 ರೂಪಾಯಿ ಮತ್ತು ಪ್ರಮಾಣ ಪತ್ರ,
ಆಯ್ದ ಲೇಖನಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.

ಲೇಖನ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 25. ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಮಾತ್ರ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಲೇಖನವನ್ನು ಈ-ಮೇಲ್ ಮೂಲಕ ಕಳುಹಿಸುವವರು [email protected] ಹಾಗೂ ಅಂಚೆ ಮೂಲಕ ಕಳುಹಿಸುವವರು ಜ್ಞಾನ ಕೇಂದ್ರ #7 ಎಸ್.ಆರ್‌.ಕೆ ಉದ್ಯಾನ, ಜಯನಗರ ಪೂರ್ವ, ಬೆಂಗಳೂರು – 560041 ಎಂಬ ವಿಳಾಸಕ್ಕೆ ಕಳುಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8183871243 /8792908185