ಅಜಿತ್ ಪವಾರ್‌ರ 1,400 ಕೋಟಿ ರೂ. ಬೇನಾಮಿ ಆಸ್ತಿ ಮುಟ್ಟುಗೋಲು!

0
618

ಸನ್ಮಾರ್ಗ ವಾರ್ತೆ

ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಎನ್‍ಸಿಪಿ ನಾಯಕ ಅಜಿತ್ ಪವಾರ್‌ರ 1400 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಯನ್ನು ತಾತ್ಕಾಲಿಕವಾಗಿ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿದೆ. ಕಾನೂನಾತ್ಮಕವಾಗಿ ಖರೀದಿಸಿದ್ದೆಂದು ತಿಳಿಸಲು ಅಜಿತ್ ಪವಾರ್‌ರಿಗೆ ಮೂರು ತಿಂಗಳ ಗಡು ವಿಧಿಸಿದೆ.

ದಕ್ಷಿಣ ದಿಲ್ಲಿಯಲ್ಲಿ 20 ಕೋಟಿ ಮೌಲ್ಯದ ಫ್ಲಾಟ್, ಮುಂಬೈ ನಿರ್ಮಲ್ ಹೌಸ್‍ನಲ್ಲಿ 25 ಕೋಟಿಯ ಮಗ ಪಾರ್ಥ ಪವಾರ್‌ರ ಕಛೇರಿ, 600 ಕೋಟಿಯ ಜರಂದೇಶ್ವರದ ಸಕ್ಕರೆ ಫ್ಯಾಕ್ಟರಿ, ಗೋವಾದಲ್ಲಿ‌ನ 250 ಕೋಟಿ ರೂ ಮೌಲ್ಯದ ರೆಸಾರ್ಟ್, 27 ಜಾಗಗಳಲ್ಲಿ 500 ಕೋಟಿಯ ಜಮೀನನ್ನು ತಾತ್ಕಾಲಿಕ ಮುಟ್ಟುಗೋಲಿಗೊಳಗಾಗಿದೆ. ಜರಂದೇಶ್ವರದ ಸಕ್ಕರೆ ಫ್ಯಾಕ್ಟರಿ ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು.

ಕಪ್ಪು ಹಣ ಬಿಳಿ ಮಾಡಿದ ಪ್ರಕರಣದಲ್ಲಿ ಇನ್ನೊರ್ವ ಎನ್‍ಸಿಪಿ ನಾಯಕ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ನ್ನು ಇಡಿ ಬಂಧಿಸಿದೆ. ಇದರ ಬೆನ್ನಿಗೆ ಅಜಿತ್ ಪವಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿದೆ.