ಎಂಎಸ್‍ಪಿ ಅಭಿ ನಹೀಂ ತೊ ಕಭೀ ನಹೀಂ: ರಾಕೇಶ್ ಟಿಕಾಯತ್‍ರಿಂದ ಹೊಸ ಘೋಷಣೆ

0
305

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರೈತ ರ ಆಂದೋಲನ ಮುಂದುವರಿಯುವ ಎಲ್ಲ ಸೂಚನೆಗಳು ವ್ಯಕ್ತವಾಗಿದ್ದು , ಕೃಷಿ ಕಾನೂನು ವಾಪಸು ತೆಗೆದ ಸರಕಾರದ ವಿರುದ್ಧ ಕನಿಷ್ಠ ಬೆಂಬಲ ಬೆಲೆ ಕಾನೂನು ತರುವ ಬೇಡಿಕೆಯೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ಈಗ ರಂಗಕ್ಕಿಳಿದಿದೆ. ಎಂಎಸ್‍ಪಿ ಅಭಿ ನಹೀಂ ತೊ ಕಭೀ ನಹೀಂ ಎಂಬ ಘೋಷಣೆಯೊಂದಿಗೆ ರೈತ ಆಂದೋಲನವನ್ನು ತೀವ್ರಗೊಳಿಸುತ್ತಿದೆ.

ರೈತರ ಹೋರಾಟ ಇನ್ನಷ್ಟು ಪ್ರಬಲವಾಗಲಿದೆ. ನಮ್ಮ ಮುಂದಿನ ಘೋಷಣೆ ಎಂಎಸ್‍ಪಿ(ಕನಿಷ್ಟ ಬೆಂಬಲ ಬೆಲೆ) ಈಗ ಇಲ್ಲದಿದ್ದರೆ ಇನ್ನೆಂದೂ ಇಲ್ಲ ಎಂದಾಗಿದೆ ಎಂದು ರಾಖೇಶ್ ಟಿಕಾಯತ್ ಹೇಳಿದರು.

ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಖೇಶ್ ಟಿಕಾಯತ್ , ಯಾವ ರೈತರೂ ಎಲ್ಲಿಗೂ ಹೋಗುವುದಿಲ್ಲ. ಆಂದೋಲನದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ತಮ್ಮತಮ್ಮ ಗಡಿಗಳನ್ನು ಬಲ ಪಡಿಸುತ್ತಾರೆ. ಆಂದೋಲನ ಹೇಗೆ ಇರಬೇಕೆಂದು ನಾಳೆ ನಿರ್ಣಯವಾಗಲಿದೆ ಎಂದವರು ಹೇಳಿದರು.

ಸರಕಾರ ಮೇಜಿನ ಮುಂದೆ ಕೂತು ಚರ್ಚಿಸಬೇಕು. ಒಂದು ವರ್ಷದ ಈ ಆಂದೋಲನ ಸಮಾಪ್ತವಾಯಿತೇ? ಹಲವು ರೈತರು ತಮ್ಮ ಫಸಲಿನ ಕಟಾವ್ ಮಾಡಿಲ್ಲ. ಇಷ್ಟು ಬೇಗ ಲೆಕ್ಕ ಹೇಗೆ ಆಗುತ್ತದೆ ಎಂದು ಟಿಕಾಯತ್ ಪ್ರಶ್ನಿಸಿದರು. ಈಗ ನಿಜವಾದ ಹೋರಾಟದ ವೇದಿಕೆ ತಯಾರಿಸಬೇಕಾಗಿದೆ. ಒಂದು ವೇಳೆ ಫಸಲಿಗೆ ಕನಿಷ್ಠ ಬೆಂಬಲ ಬೆಲೆ ಎಂಎಸ್‍ಪಿಯಿಂದ ನಷ್ಟವಿದೆ ಎಂದಾದರೆ ಸರಕಾರ ಲಾಭ ಮತ್ತು ನಷ್ಟದ ಬಗ್ಗೆ ಹೇಳಲಿ ಎಂದು ಅವರು ಹೇಳಿದರು.