ಆಂಗ್‍ ಸಾನ್ ಸೂಕಿ‌ ಪುನಃ ಜೈಲಿಗೆ; ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

0
227

ಸನ್ಮಾರ್ಗ ವಾರ್ತೆ

ಯಾಂಗೂನ್: ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ಪುನಃ ಜೈಲುಪಾಲಾಗಿದ್ದಾರೆ. ಕೊರೋನ ಪ್ರೊಟೊಕಾಲ್ ಉಲ್ಲಂಘನೆ ಹಾಗೂ ಸೇನೆಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕೊರೊನ ನಿಯಂತ್ರಣ ಉಲ್ಲಂಘಿಸಿದ್ದಕ್ಕೆ ಎರಡು ವರ್ಷ ಮತ್ತು ಇದಕ್ಕೆ ಪ್ರೇರೇಪಿಸಿದ್ದಕ್ಕೆ ಎರಡು ವರ್ಷ ಜೈಲುವಾಸ ಶಿಕ್ಷೆಯನ್ನು ಸೈನಿಕಾಡಳಿತ ನೀಡಿದೆ. ಮಾಜಿ ಅಧ್ಯಕ್ಷ ವಿನ್ ಮಿಂಟ್‍ರಿಗೂ ಇದೇ ರೀತಿಯ ಶಿಕ್ಷೆಯನ್ನು ನೀಡಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಫೆಬ್ರುವರಿ 1ರಂದು ಸೈನ್ಯ ಬುಡಮೇಲು ಕೃತ್ಯದೊಂದಿಗೆ ಅಧಿಕಾರ ವಶಪಡಿಸಿಕೊಂಡಿತ್ತು. ನಂತರ ಸೂಕಿಯ ವಿರುದ್ಧ ಕ್ರಮ ಜರಗಿಸಲಾಗಿದೆ. ಅಂದರೆ ಇತರ ಕೇಸುಗಳಲ್ಲಿ ಸೂಕಿಯ ವಿರುದ್ಧ ಕೋರ್ಟು ತೀರ್ಪು ಬಂದರೆ ಹಲವು ವರ್ಷ ಅವರು ಜೈಲಿನೊಳಗಾಗಲಿದ್ದಾರೆ.

ಕಳೆದ ವರ್ಷ ಚುನಾವಣೆ ಪ್ರಚಾರದ ವೇಳೆ ಕೊರೋನ ಪ್ರೊಟೊ ಕಾಲ್ ಉಲ್ಲಂಘಿಸಿದ್ದಾರೆ ಎಂದು ಸೂಕಿಯ ವಿರುದ್ಧ ಆರೋಪ ಹೊರಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಸೂಕಿಯ ನೇತೃತ್ವದ ಪಾರ್ಟಿ ಚುನಾವಣೆಯಲ್ಲಿ ವಿಜಯಗಳಿಸಿದೆ. ನಂತರ ಸೇನೆ ಚುನಾಯಿತ ಸರಕಾರವನ್ನು ಬುಡಮೇಲುಗೊಳಿಸಿ ಅಧಿಕಾರವನ್ನು ಕಿತ್ತುಕೊಂಡಿತ್ತು.