ಮಥುರಾದ ಬಿಳಿ ಕಟ್ಟಡವನ್ನು ಮುಸ್ಲಿಮರು ಹಿಂದೂಗಳಿಗೆ ಬಿಟ್ಟು ಕೊಡಬೇಕು: ವಿವಾದಾತ್ಮಕ ಹೇಳಿಕೆ ನೀಡಿದ ಉ.ಪ್ರದೇಶ ಸಚಿವ

0
307

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಶ್ರೀ ಕೃಷ್ಣ ಜನ್ಮಭೂಮಿ ಸಮೀಪದ ಬಿಳಿ ಕಟ್ಟಡವನ್ನು ಮುಸ್ಲಿಮರು ಹಿಂದುಗಳಿಗೆ ಬಿಟ್ಟು ಕೊಡಬೇಕೆಂದು ಉತ್ತರಪ್ರದೇಶ ಸಚಿವ ಆನಂದ್ ಸ್ವರೂಪ್ ಶುಕ್ಲ ಹೇಳಿದರು. ಡಿಸೆಂಬರ್ ಆರಕ್ಕೆ ಬಾಬರಿ ಮಸೀದಿ ಹಿಂದುತ್ವವಾದಿಗಳು ಕೆಡವಿದ ಸ್ಮರಣೆಯ ದಿನದಲ್ಲಿ ಮಥುರದ ಶಾಹಿ ಈದ್ಗಾಹ್‍ನಲ್ಲಿ ಶ್ರೀಕೃಷ್ಣ ವಿಗ್ರಹ ಸ್ಥಾಪಿಸುವುದಾಗಿ ಹಿಂದತ್ವ ಸಂಘಟನೆಗಳು ಘೋಷಿಸಿದ ಬೆನ್ನಿಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.ಇದರ ಬೆನ್ನಿಗೆ ಸಚಿವರು ವಿವಾದಾತ್ಮಕ ಹೇಳಿಕೆ ನೀಡಿದರು. ಅಯೋಧ್ಯೆ ಸಮಸ್ಯೆ ಕೋರ್ಟು ಬಗೆಹರಿಸಿದರೂ ಕಾಶಿ ಮಥುರೆಯ ಬಿಳಿಕಟ್ಟಡಗಳು ಹಿಂದೂಗಳನ್ನು ನೋಯಿಸುತ್ತಿದೆ ಎಂದು ಅವರು ಹೇಳಿದರು. ಎರಡು ಕಡೆಯೂ ಮುಸ್ಲಿಂ ಧಾರ್ಮಿಕ ಸಂಘಟನೆಗಳು ಇದಕ್ಕೆ ಪರಿಹಾರ ಕಾಣಬೇಕೆಂದು ಸಚಿವರು ಹೇಳಿದರು.

ಮಥುರಾದ ಬಿಳಿ ಕಟ್ಟಡ ಎಲ್ಲ ಹಿಂದೂಗಳನ್ನು ನೋಯಿಸುತ್ತದೆ. ಕೋರ್ಟಿನ ಸಹಾಯದಲ್ಲಿ ಅದನ್ನು ತೆರವುಗೊಳಿಸುವ ಒಂದು ಕಾಲ ಬರಬಹುದು. ರಾಮನೂ ಕೃಷ್ಣನೂ ನಮ್ಮ ಪೂರ್ವಿಕರು ಆಗಿದ್ದಾರೆ. ಬಾಬರ್, ಅಕ್ಬರ್, ಔರಂಗ್‌ಜೇಬ್ ಅಕ್ರಮಿಗಳೆಂದು ಭಾರತದ ಮುಸ್ಲಿಮರು ನಂಬಬೇಕಾಗಿ ಬರಲಿದೆ ಎಂದು ಡಾ.ರಾಮ್‍ಮನೋಹರ್ ಲೋಹಿಯ ಹೇಳಿದ್ದರು. ಅವರು ಕಟ್ಟಿದ ಒಂದು ಕಟ್ಟಡದೊಂದಿಗೆ ನೀವು ಸಂಬಂಧ ಇರಿಸಬೇಡಿ ಎಂದು  ಸಚಿವ ಶುಕ್ಲ ಸೋಮವಾರ ಸಂಜೆ ಪತ್ರಕರ್ತರೊಂದಿಗೆ ಮಾತಾಡುವ ವೇಳೆ ಹೇಳಿದರು.

ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಸಮುಚ್ಚಯದಲಿರುವ ಬಿಳಿ ಕಟ್ಟಡ ಹಿಂದೂಗಳಿಗೆ ಕೊಡಲು ಮುಸ್ಲಿಂ ಸಮುದಾಯ ಮುಂದೆ ಬರಬೇಕು. ಈ ಕೆಲಸ ಪೂರ್ತಿಯಾಗುವ ಕಾಲ ಬರಲಿದೆ. 1992 ಡಿಸೆಂಬರ್ ಆರಕ್ಕೆ ಕರ ಸೇವಕರು ರಾಮಲಲ್ಲದ ಕಳಂಕ ನಿವಾರಿಸಿದರು. ಈಗ ಅಲ್ಲಿ ಒಂದು ದೊಡ್ಡ ಮಂದಿರ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದರು. ಮುಸ್ಲಿಮರು ಘರ್ ವಾಪಸಿ ಅನುಸರಿಸಬೇಕೆಂದು ಅವರು ಹೇಳಿದರು. ದೇಶದ ಎಲ್ಲ ಮುಸ್ಲಿಮರು ಮತಾಂತರಗೊಂಡವರು. ಅವರ ಇತಿಹಾಸ ನೋಡಿದರೆ 200-250 ವರ್ಷ ಹಿಂದೆ ಅವರು ಹಿಂದೂ ಧರ್ಮದಿಂದ ಇಸ್ಲಾಮ್ ಧರ್ಮಕ್ಕೆ ಬಂದಿದ್ದರು. ಅವರೆಲ್ಲರನ್ನೂ ಘರ್ ವಾಪಸಿ ಮಾಡುವುದು ನಮಗಿಷ್ಟ ಎಂದು ಸಚಿವರು ಹೇಳಿದರು.