ತ್ರಿಪುರಾ ಮುಖ್ಯಮಂತ್ರಿಯೇ ಬಾಂಗ್ಲಾದೇಶಿ, ಸಿಎಎಯಡಿ ಹಿಂದೂಗಳಿಗೆ ಪೌರತ್ವ ಕೊಡುವುದೇ ತಪ್ಪು: ತ್ರಿಪುರ ಪೀಪಲ್ಸ್ ಫ್ರoಟ್ ನ ಅಧ್ಯಕ್ಷೆ ಜಮಾದಿಯಾ

0
242

ಸನ್ಮಾರ್ಗ ವಾರ್ತೆ

ಅಗರ್ತಲಾ: ತ್ರಿಪುರದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಘರ್ಷಣೆ ನಡೆದಿಲ್ಲ. ಬಾಂಗ್ಲಾದೇಶದಿಂದ ಅನಧಿಕೃತವಾಗಿ ವಲಸೆ ಬಂದವರ ನಡುವೆ ಘರ್ಷಣೆ ನಡೆದಿದೆ. ತ್ರಿಪುರಾ ಮುಖ್ಯಮಂತ್ರಿಯೇ ಬಾಂಗ್ಲಾದೇಶಿ, ಸಿಎಎಯಡಿ ಹಿಂದೂಗಳಿಗೆ ಪೌರತ್ವ ಕೊಡುವುದೇ ತಪ್ಪು ಎಂದು ತ್ರಿಪುರ ಪೀಪಲ್ಸ್ ಫ್ರoಟ್ ನ ಅಧ್ಯಕ್ಷೆ ಫಡಾಲ್ ಕನ್ಯಾ ಜಮಾದಿಯಾ ಹೇಳಿದ್ದಾರೆ.

ತ್ರಿಪುರದಲ್ಲಿ ಈಗ ಬಾಂಗ್ಲಾದೇಶಿಯರ ಸರಕಾರ ಇದೆ. ಮತ್ತು ತ್ರಿಪುರಾದ ಮುಖ್ಯಮಂತ್ರಿ ಮತ್ತು ಕೆಲವು ಸಚಿವರು ಬಾಂಗ್ಲಾದೇಶಿಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ತ್ರಿಪುರದಲ್ಲಿರುವ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆ ಹಚ್ಚುವುದಕ್ಕಾಗಿ ಎನ್ ಆರ್ ಸಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ನೇತೃತ್ವ ನೀಡಿರುವ ಅವರು, ಈ ಕರೆ ನೀಡಿದ್ದಾರೆ

ಅನಧಿಕೃತವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿಯರನ್ನು ಹೊರಹಾಬೇಕೆಂದು ಹೇಳುವಾಗ ಅದರಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಇಲ್ಲ. ತ್ರಿಪುರಾ ಹಿಂಸಾಚಾರವನ್ನು ಹಿಂದೂ-ಮುಸ್ಲಿಂ ಘರ್ಷಣೆಯಾಗಿ ನೋಡಲು ಯತ್ನಿಸಲಾಗುತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದವರು ಹೇಳಿದ್ದಾರೆ.

ತ್ರಿಪುರದಲ್ಲಿರುವ ಬಾಂಗ್ಲಾದೇಶಿ ಅಕ್ರಮ ಹಿಂದೂ ನಿವಾಸಿಗಳಿಗೆ ಸಿಎಎ ಕಾಯ್ದೆ ಅಡಿಯಲ್ಲಿ ಪೌರತ್ವ ನೀಡುವುದನ್ನು ನಾವು ಒಪ್ಪುವುದಿಲ್ಲ. ತ್ರಿಪುರದಲ್ಲಿರುವ ಘರ್ಷಣೆ, ಹತ್ಯೆ ಅನಾಚಾರಗಳಿಗೆ ಸಂಬಂಧಿಸಿ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಇಲ್ಲಿನ ಬಿಜೆಪಿ ಸರಕಾರವನ್ನು ಕಿತ್ತೊಗೆದು ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ಎಂದವರು ಆಗ್ರಹಿಸಿದ್ದಾರೆ.