ಗೋವಾ ಮಾಜಿ ಮುಖ್ಯಮಂತ್ರಿ ಬಿಜೆಪಿ ಸೇರ್ಪಡೆ

0
243

ಸನ್ಮಾರ್ಗ ವಾರ್ತೆ

ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಶಾಸಕ ರವಿ ಸೀತಾರಾಮ್ ನಾಯಕ್ ಬಿಜೆಪಿಗೆ ಸೇರ್ಪಡೆಯಾದರು. ಇವರು ಪೊಂಡಿಯ ಶಾಸಕರಾಗಿದ್ದು ಈ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಅವರು ಗೋವಾ ವಿಧಾಸಭಾ ಸ್ಪೀಕರ್ ಕಚೇರಿಗೆ ತಿಳಿಸಿದರು. ಮಂಗಳವಾರ ಸಂಜೆ ಪೊಂಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಉಪಸ್ಥಿತಿಯಲ್ಲಿ ರವಿ ನಾಯಕ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ರವಿ ನಾಯಕ್ ಕೂಡ ಕಾಂಗ್ರೆಸ್ ತ್ಯಜಿಸಿದ್ದರಿಂದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 3ಕ್ಕೆ ಕುಸಿದಿದೆ. 2017ರ ವಿಧಾನ ಸಭಾಚುನಾವಣೆಯಲ್ಲಿ 40 ಸದಸ್ಯರ ವಿಧಾನ ಸಭೆಯಲ್ಲಿ ಹದಿನೇಳು ಶಾಸಕರನ್ನು ಕಾಂಗ್ರೆಸ್ ಗೆದ್ದಿತ್ತು. ಆದರೆ ಶಾಸಕರೆಲ್ಲ ಕಾಂಗ್ರೆಸ್ ತೊರೆದು ಬಿಜೆಪಿಗೆ ಪಲಾನ ಮಾಡಿದ್ದಾರೆ. ನಾಯಿಕ್ ಎರಡನೇ ಬಾರಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. 2000 ಅಕ್ಟೋಬರಿನಲ್ಲಿ ಮನೋಹರ್ ಪಾರಿಕ್ಕರ್ ಮುಖ್ಯಮಂತ್ರಿಯಾಗಿದ್ದಾಗ ನಾಯಕ್ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಪಾರಿಕ್ಕರ್ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. 2002ರ ವಿಧಾನಸಭಾ ಚುನಾವಣೆಯ ಸ್ವಲ್ಪ ಮೊದಲು ಬಿಜೆಪಿಯಿಂದ ಕಾಂಗ್ರೆಸ್‍ಗೆ ಮರಳಿದ್ದರು. ನಾಯಕ್‍ರ ಇಬ್ಬರು ಮಕ್ಕಳು ಬಿಜೆಪಿಗೆ ಹೋದ ನಂತರ ಅವರು ಕಾಂಗ್ರೆಸ್‍ನಲ್ಲಿ ಸಕ್ರಿಯವಾಗಿರಲಿಲ್ಲ. ಇದರೊಂದಿಗೆ ಕಾಂಗ್ರೆಸ್ ನಾಯಕ್‍ರನ್ನು ದೂರ ಇಟ್ಟಿತ್ತು. ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೊದಂಕರ್ ನಾಯಿಕ್‍ರನ್ನು ಕಾಂಗ್ರೆಸ್ ಶಾಸಕ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದರು.