ಪಾಕಿಸ್ತಾನದ ಕರಾಚಿಯಲ್ಲಿ ಬಾಂಬ್ ಸ್ಫೋಟ, 10 ಮಂದಿ ಮೃತ; ಬ್ಯಾಂಕ್ ಕಟ್ಟಡ ನಾಶ

0
414

ಸನ್ಮಾರ್ಗ ವಾರ್ತೆ

ಕರಾಚಿ: ಪಾಕಿಸ್ತಾನದ ಕರಾಚಿ ನಗರದ ಕಟ್ಟಡವೊಂದರಲ್ಲಿ ಶನಿವಾರ ಭಾರೀ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂಬುದಾಗಿ ವರದಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಕರಾಚಿ ಆಡಳಿತ ಮಂಡಳಿಯು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಖಾಸಗಿ ಬ್ಯಾಂಕ್ ಅಡಿಯಲ್ಲಿರುವ ಚರಂಡಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಎಸ್‌ಎಚ್‌ಒ ಜಾಫರ್ ಅಲಿ ಶಾ ತಿಳಿಸಿದ್ದಾರೆ. ಸ್ಫೋಟದಿಂದಾಗಿ ಬ್ಯಾಂಕ್ ಕಟ್ಟಡ ನಾಶವಾಗಿದೆ. ಇದಲ್ಲದೇ ಪೆಟ್ರೋಲ್ ಪಂಪ್‌ಗೂ ಹಾನಿಯಾಗಿದೆ.