ಪ್ರಧಾನಿಯನ್ನು ಆಯ್ಕೆ ಮಾಡುವ ವಯಸ್ಸಿನಲ್ಲಿ ಬಾಳ ಸಂಗಾತಿ ಯಾರಾಗಬೇಕೆಂದು ಆಯ್ಕೆ ಮಾಡಬಾರದೇ?: ಉವೈಸಿ

0
449

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹದಿನೆಂಟು ವರ್ಷ ವಯಸ್ಸಿನ ಒಬ್ಬಳು ಹೆಣ್ಣುಮಗಳಿಗೆ ಪ್ರಧಾನಿಯನ್ನು ಆಯ್ಕೆ ಮಾಡಬಹುದು ಎಂದಾದರೆ ಯಾಕೆ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಮೋದಿ ಸರಕಾರವನ್ನು ಟೀಕಿಸಿದ್ದಾರೆ. ಅವರು ಎನ್‍ಐಎ ಸಂದರ್ಶನದಲ್ಲಿ ಈ ಪ್ರಶ್ನೆ ಎತ್ತಿದರು.

ಹದಿನೆಂಟು ವರ್ಷದ ಭಾರತೀಯ ಪ್ರಜೆಗೆ ಒಪ್ಪಂದದಲ್ಲಿ ಸಹಿ ಹಾಕಬಹುದು, ವ್ಯಾಪಾರ ಮಾಡಬಹುದು, ಪ್ರಧಾನಿಯನ್ನು ತೀರ್ಮಾನಿಸಬಹುದು, ಶಾಸಕರು, ಸಂಸದರನ್ನು ತೀರ್ಮಾನಿಸಬಹುದು ಆದರೆ ಬಾಳ ಸಂಗಾತಿಯನು ತೀರ್ಮಾನಿಸಲು ಆಗದೇ. ಪುರುಷರ ಮದುವೆ ವಯಸ್ಸು 18 ಮಾಡಬೇಕೆಂಬುದು ನನ್ನ ಅಭಿಪ್ರಾಯ. ಮಹಿಳೆಯರ ಉನ್ನತಿಗಾಗಿ ಯಾವುದನ್ನೂ ಮಾಡದ ಸರಕಾರವಿದು ಎಂದು ಉವೈಸಿ ಟೀಕಿಸಿದರು.

ಬಾಲ್ಯ ವಿವಾಹ ಭಾರತದಲ್ಲಿ ಕಡಿಮೆಯಾಗಲು ಕಾರಣ
ಕ್ರಿಮಿನಲ್ ಕಾನೂನು ಇರುವುದರಿಂದಾಗಿದೆ. ಶಿಕ್ಷಣ ಪಡೆದು ಆರ್ಥಿಕವಾಗಿ ಸಣ್ಣ ಮಟ್ಟದ ಪ್ರಗತಿಯಿಂದಾಗಿ ಬಾಲ್ಯ ವಿವಾಹ ನಿಲ್ಲುವುದಕ್ಕೆ ಕಾರಣವಾಯಿತು. ಆದರೂ ಸುಮಾರು 12 ಮಿಲಿಯನ್ ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಮೊದಲೇ ಮದುವೆಯಾಗುತ್ತಿದ್ದಾರೆಂಬುದನ್ನು ಅಂಕಿಅಂಶಗಳು ಹೇಳುತ್ತವೆ.