ಹಿಂದುತ್ವವನ್ನು ಐಎಸ್‌ಗೆ ಹೋಲಿಸಿದ ಆರೋಪ: ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್‌ಐಆರ್ ದಾಖಲಿಸಲು ಯುಪಿ ಕೋರ್ಟ್ ಆದೇಶ

0
226

ಸನ್ಮಾರ್ಗ ವಾರ್ತೆ

ಲಕ್ನೊ: ಹಿಂದುತ್ವವನ್ನು ಭಯೋತ್ಪಾದಕ ಸಂಘಟನೆ ಐಎಸ್‍‌ಐಎಸ್‌ಗೆ ಹೋಲಿಸಿದ ಹಿರಿಯ ವಕೀಲ ಮತ್ತು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ವಿರುದ್ಧ ಕೇಸು ದಾಖಲಿಸಲು ಲಕ್ನೊ ಮ್ಯಾಜಿಸ್ಟ್ರೇಟ್ ಕೋರ್ಟು ಆದೇಶ ನೀಡಿದೆ. “ಸನ್‍ರೈಸ್ ಓವರ್ ಅಯೋಧ್ಯ- ನೇಶನ್‌ಹುಡ್ ಇನ್ ಅವರ್ ಟೈಮ್ಸ್” ಎಂಬ ಪುಸ್ತಕದಲ್ಲಿ ಹಿಂದುತ್ವವನ್ನು ಅವರು ಬೊಕೊ ಹರಂ ಐಎಸ್ ಭಯೋತ್ಪಾದಕ ಸಂಘಟನೆಗೆ ಹೋಲಿಸಿದ್ದರು.

ಅವರ ಹೇಳಿಕೆ ಹಿಂದು ಧರ್ಮಕ್ಕೆ ಹಾನಿಪಡಿಸುತ್ತದೆ ಎಂದು ಶುಭಾಂಗಿ ತಿವಾರಿ ಸಲ್ಲಿಸಿದ ಅರ್ಜಿಯಲ್ಲಿ ಹೆಚ್ಚುವರಿ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಶಾಂತನು ತ್ಯಾಗಿ ಎಫ್‍ಐಆರ್ ದಾಖಲಿಸಲು ಉತ್ತರಪ್ರದೇಶ ಪೊಲೀಸರಿಗೆ ಆದೇಶಿಸಿದರು. ಮೂರು ದಿವಸದೊಳಗೆ ಎಫ್‍ಐಆರ್ ದಾಖಲಿಸಬೇಕೆಂದು ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ. ಪುಸ್ತಕ ಬಿಡುಗಡೆಗೊಳಿಸದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟು ತಳ್ಳಿ ಹಾಕಿತ್ತು.

ಪುಸ್ತಕದ ಬಿಡುಗಡೆ ಮಾರಾಟ ತಡೆಯಬೇಕೆಂದು ಆಗ್ರಹಿಸಿ ವಕೀಲರೊಬ್ಬರು ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಹೈಕೋರ್ಟು ತಳ್ಳಿಹಾಕಿತ್ತು. ಅಯೋಧ್ಯೆಯ ತೀರ್ಪಿನ ಹಿನ್ನೆಲೆಯಲ್ಲಿ ಪುಸ್ತಕವನ್ನು ಸಲ್ಮಾನ್ ಖುರ್ಷಿದ್ ರಚಿಸಿದ್ದಾರೆ. ಅದರಲ್ಲಿ ಅವರು ಹಿಂದುತ್ವವನ್ನು ಪ್ರಶ್ನಿಸಿದ್ದಾರೆ. ಹಿಂದೂ ಧರ್ಮ ಮತ್ತು ಹಿಂದುತ್ವದ ವ್ಯತ್ಯಾಸ್ವನ್ನು ಸಮಾಜಕ್ಕೆ ತಿಳಿಸಬೇಕೆಂದು ಅವರು ಅದರಲ್ಲಿ ಆಗ್ರಹಿಸಿದ್ದಾರೆ.