ಚುನಾವಣೆ ಮುಂದೂಡಿಕೆ ಸಾಧ್ಯತೆ: ಡಿ. 27ರಂದು ಆರೋಗ್ಯ ಕಾರ್ಯದರ್ಶಿಯೊಂದಿಗೆ ಚುನಾವಣಾ ಆಯೋಗದಿಂದ ಚರ್ಚೆ

0
224

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಐದು ರಾಜ್ಯಗಳಿಗೆ ನಡೆಯಲಿರುವ ವಿಧಾನಸಭಾ ಚುನಾಣೆಯ ಕುರಿತು ಚುನಾವಣಾ ಆಯೋಗ ಚರ್ಚೆ ಆರಂಭಿಸಿದ್ದು ಕೇಂದ್ರ ಆರೋಗ್ಯ ಕಾರ್ಯದರ್ಶಿಯೊಂದಿಗೆ ಡಿಸೆಂಬರ್ 27ಕ್ಕೆ ಚರ್ಚಿಸಲಿದೆ. ಉತ್ತರಪ್ರದೇಶ, ಉತ್ತರಾಖಂಡ, ಗೋವ, ಪಂಜಾಬ್, ಮಣಿಪುರಗಳ ಚುನಾವಣೆ ನಡೆಲಿದೆ. ಕಳೆದ ದಿವಸ ಚುನಾವಣೆ ಮುಂದೂಡಿಕೆಯ ವಿಷಯ ಪರಿಗಣಿಸಬೇಕೆಂದು ಅಲಾಹಾಬಾದ್ ಹೈಕೋರ್ಟು ಹೇಳಿತ್ತಲ್ಲದೇ ಈ ಕುರಿತು ಚುನಾವಣಾ ಆಯುಕ್ತರಿಗೆ ಸೂಚಿಸಿತ್ತು. ಚುನಾವಣೆ ನಡೆಯುವ ರಾಜ್ಯಗಳಲ್ಲಿ ರ್ಯಾಲಿಗಳನ್ನು ನಿಯಂತ್ರಿಸಲು ಪ್ರಧಾನಿಯನ್ನ ಆಗ್ರಹಿಸಿತ್ತು. ಇದಾದ ಮೇಲೆ ಚುನಾವಣಾ ಆಯೋಗ ಮಧ್ಯಪ್ರವೇಶಿಸಿದೆ.

ಚುನಾವಣೆಗೆ ಸಂಬಂಧ ಇಲ್ಲದ ಜಾಮೀನು ಅರ್ಜಿ ವಿಚಾರಣೆ ವೇಳೆ ಹೈಕೋರ್ಟು ಚುನಾವಣೆಯ ಕುರಿತು ಪ್ರತಿಕ್ರಿಯಿಸಿದೆ. ಕೋರ್ಟಿನಲ್ಲಿ ದಿನಾಲೂ ನೂರಾರು ಪ್ರಕರಣಗಳು ವಿಚಾರಣೆಗೆ ಬರುವುದರಿಂದ ನೂರಾರು ಮಂದಿ ಒಟ್ಟು ಗೂಡುತ್ತಾರೆ. ಕೊರೋನದ ಒಮಿಕ್ರಾನ್ ರೂಪಾಂತರ ಹೆಚ್ಚಳವಾಗುತ್ತಿದೆ. ಮೂರನೇ ತರಂಗದ ಸಾಧ್ಯತೆ ನಿರಾಕರಿಸುವಂತಿಲ್ಲ. ಹೊಸ ಪರಿಸ್ಥಿತಿಯಲ್ಲಿ ಲಾಕ್ ಡೌನ್ ವಿಚಾರ ಪರಿಗಣಿಸಬೇಕೆಂದು ಕೋರ್ಟು ಹೇಳಿದೆ.

ಪ.ಬಂಗಾಳದ ಗ್ರಾಮ ಪಂಚಾಯತು, ವಿಧಾನಸಭಾ ಚುನಾವಣೆ ಕೊರೋನ ವ್ಯಾಪನಕ್ಕೆ ದಾರಿಯೊದಗಿಸಿತ್ತು. ಉತ್ತರಪ್ರದೇಶ ಚುನಾವಣೆಗೂ ಮುನ್ನ ರ್ಯಾಲಿ, ಸ್ಮಮೇಳನ ನಡೆಯುತ್ತಿದೆ. ಇದು ಕೊರೋನ ಪ್ರಕರಣ ಹೆಚ್ಚಲು ಕಾರಣವಾಗಬಹುದು. ರಾಜಕೀಯ ಪಾರ್ಟಿಗಳಿಗೆ ಪತ್ರಿಕೆ ಮತ್ತು ದೂರದರ್ಶನಗಳ ಮೂಲಕ ಚುನಾವಣಾ ಆಭಿಯಾನ ನಡೆಸಲು ಚುನಾವಣಾ ಆಯೋಗ ಸೂಚಿಸಬೇಕೆಂದು ಕೋರ್ಟು ಸೂಚಿಸಿದೆ.