ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ, ಗೋಹತ್ಯೆ ಕಾನೂನು ರದ್ದು: ಡಿ.ಕೆ ಶಿವಕುಮಾರ್

0
240

ಸನ್ಮಾರ್ಗ ವಾರ್ತೆ

ಬೆಂಗಳೂರು: ಬಿಜೆಪಿ ಸರಕಾರದ ಕಾಲದಲ್ಲಿ ಮತಾಂತರ ನಿಷೇಧ ಕಾನೂನು ಆದರೆ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರ ಅದನ್ನು ಹಿಂಪಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ‌ ಶಿವಕುಮಾರ್ ಹೇಳಿದರು. ನಾನು ಹೇಳಿದ್ದು ಬರೆದಿಡಿ ಮತಾಂತರ, ಸಂಪೂರ್ಣ ಗೋಹತ್ಯೆ ನಿಷೇಧ ಕಾನೂನು 2023ರಲ್ಲಿ ಅಧಿಕಾರಕ್ಕೆ ಬಂದರೆ ಹಿಂಪಡೆಯಲಾಗುವುದು ಎಂದು ಅವರು ಹೇಳಿದರು.

ಈ ಹಿಂದೆ ಸಿದ್ದರಾಮಯ್ಯ ಕೂಡ ಹೀಗೆಯೇ ಹೇಳಿದ್ದು ಬಿಜೆಪಿಯವರೇ ಬಹುಸಂಖ್ಯಾತರು ಎಂಬ ತಪ್ಪುಕಲ್ಪನೆ ಅವರಿಗಿದೆ. ಪ್ರಮಾಣ ವಚನದ ವೇಳೆ ಒಂದೇ ವರ್ಗಕ್ಕಾಗಿ ಕೆಲಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿರುವುದನ್ನು ಮರೆತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಸಂಪೂರ್ಣ ಗೋಹತ್ಯೆ ನಿಷೇಧದಿಂದ ಹಿಂದೂ ರೈತರು ಕಷ್ಟಪಡುತ್ತಿದ್ದಾರೆ. ಜನರು ಈ ಕಾನೂನಿಂದ ಮುಸ್ಲಿಮರಿಗೆ ಕಷ್ಟ ಆಗಿದೆ ಎಂದು ಭಾವಿಸಿದ್ದರೆ. ಆದರೆ ಹೀಗಲ್ಲ ಕಷ್ಟ ಹಿಂದೂ ರೈತರದ್ದು. ಅವರಿಗೆ ಒಂದು ದನಕ್ಕೆ 40,000ರೂಪಾಯಿವರೆಗರ ಸಿಗುತ್ತಿತ್ತು. ಈಗ ಏನೂ ಇಲ್ಲ ಎಂದು ಹೇಳಿದರು.

ಇದೆಲ್ಲ ತಾನೂ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷನೆಂಬ ನೆಲೆಯಲ್ಲಿ ಹೇಳುತ್ತಿದ್ದೇನೆ. 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿವಾದ ಕಾನೂನು ಹಿಂಪಡೆಯಲಾಗುವುದು. ಮತಾಂತರ ನಿಷೇಧ ಕಾನೂನಿನಿಂದ ರಾಜ್ಯದ ನಿಷ್ಪಕ್ಷತೆಗೆ ಪ್ರತಿಕೂಲವಾಗಿದೆ ಎಂದು ಡಿಕೆ ಶಿವಕುಮಾರ್ ಮುನ್ನೆಚ್ಚರಿಕೆ ನೀಡಿದರು.