ಓಮಿಕ್ರಾನ್: ಉತ್ತರಪ್ರದೇಶದಲ್ಲಿ ನಾಳೆಯಿಂದ ರಾತ್ರೆ ಕರ್ಫ್ಯೂ

0
270

ಸನ್ಮಾರ್ಗ ವಾರ್ತೆ

ಲಕ್ನೊ: ಓಮಿಕ್ರಾನ್ ಭೀತಿಯಿಂದ ಉತ್ತರ ಪ್ರದೇಶದಲ್ಲಿ ನಾಳೆಯಿಂದ ರಾತ್ರೆ ಕರ್ಫ್ಯೂ ವಿಧಿಸಲಾಗಿದೆ. ರಾತ್ರೆ ಹನ್ನೊಂದು ಗಂಟೆಯಿಂದ ಬೆಳಗ್ಗೆ ಐದು ಗಂಟೆಯವರೆಗೆ ಕರ್ಫ್ಯೂ ಇರಲಿದ್ದು ಉತ್ತರ ಪ್ರದೇಶದಲ್ಲಿ ಓಮಿಕ್ರಾನ್ ಹಿನ್ನೆಲೆಯಲ್ಲಿ ನಿಯಂತ್ರಣಗಳನ್ನು ಕಠಿಣಗೊಳಿಸಲಾಗಿದೆ.

ಮದುವೆ ಮತ್ತು ಇತರ ಆಚರಣೆಗಳಿಗೆ 200ಕ್ಕಿಂತ ಹೆಚ್ಚು ಜನರು ಸೇರಬಾರದು. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೊರೋನ ಪ್ರೊಟೊಕಾಲ್ ಅನಸುರಿಸಬೇಕೆಂದು ಅಧಿಕಾರಿಗಳು ಹೇಳಿದರು. ಎರಡು ತಿಂಗಳಿಗೆ ಚುನಾವಣೆ ಮುಂದೂಡಲು ಅಲಾಹಾಬಾದ್ ಹೈಕೋರ್ಟು ಸೂಚಿಸಿತ್ತು. ಇದಾದ ಮರುದಿನವೇ ರಾತ್ರೆ ಕರ್ಫ್ಯೂ‌ಗೆ ಯೋಗಿ ಸರಕಾರ ಮುಂದಾಗಿದೆ. ಉತ್ತರ ಪ್ರದೇಶದಲ್ಲಿ ಇದುವರೆಗೆ ಎರಡು ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ. ಮಧ್ಯಪ್ರದೇಶದಲ್ಲಿ ಈ ಹಿಂದೆಯೇ ರಾತ್ರೆ ಕರ್ಫ್ಯೂ ಜಾರಿಯಲ್ಲಿದೆ.