ಈಕ್ವೆಡಾರ್: 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ವ್ಯಾಕ್ಸಿನ್ ಕಡ್ಡಾಯ

0
281

ಸನ್ಮಾರ್ಗ ವಾರ್ತೆ

ಈಕ್ವೆಡಾರ್: ಐದು ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲ ಮಕ್ಕಳು ಕಡ್ಡಾಯವಾಗಿ ವ್ಯಾಕ್ಸಿನ್ ತೆಗೆದುಕೊಳ್ಳಬೇಕೆಂದು ಈಕ್ವೆಡಾರ್ ಸರಕಾರ ಆಜ್ಞಾಪಿಸಿದೆ. ಈ ರೀತಿ ಈಕ್ವೆಡಾರ್ ಪ್ರಪಂಚದಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ಕಡ್ಡಾಯಗೊಳಿಸಿದ ಪ್ರಥಮ ದೇಶ ಎನಿಸಿಕೊಂಡಿದೆ. ಇತ್ತೀಚೆಗೆ ಈಕ್ವೆಡಾರ್‌ನಲ್ಲಿ ಓಮಿಕ್ರಾನ್‌ನ ಪ್ರಥಮ ಪ್ರಕರಣ ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಶಾಪಿಂಗ್ ಮಾಲ್, ಸಿನೆಮಾ ಗೃಹ, ಹೊಟೇಲುಗಳಂತಹ ಸಾರ್ವಜನಿಕ ಸ್ಥಳಗಳಿಗೆ ಹೋಗುವ ವ್ಯಾಕ್ಸಿನ್ ಸರ್ಟಿಫಿಕೆಟ್ ಕಡ್ಡಾಯಗೊಳಿಸಲಾಗಿದೆ.

ಈಕ್ವೆಡಾರಿನ ಒಟ್ಟು ಜನಸಂಖ್ಯೆಯ ಶೇ.69 ರಷ್ಟು ಮಂದಿ ಪ್ರಥಮ ಡೋಸ್ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ವೈದ್ಯಕೀಯ ಕಾರಣಗಳಿರುವವರಿಗೆ ವ್ಯಾಕ್ಸಿನೇಶನ್ ಕಡ್ಡಾಯವಲ್ಲ. ಇಲ್ಲಿ ಒಟ್ಟು 5,40,00 ಕೊರೋನ ಪ್ರಕರಣಗಳು ವರದಿಯಾಗಿದ್ದು, 33,600 ಮಂದಿ ಕೊರೋನದಿಂದ ಮೃತಪಟ್ಟಿದ್ದಾರೆ. ಇಲ್ಲಿನ ಜನಸಂಖ್ಯೆ 1.77 ಕೋಟಿ ಆಗಿದೆ.