ಇದೊಂದು ಬದಲಾವಣೆಯ ಫಾತಿಹವಾಗಿರಲಿ

0
319

ಸೂಕ್ತ : 88
لَا تَمُدَّنَّ عَيْنَيْكَ إِلَىٰ مَا مَتَّعْنَا بِهِ أَزْوَاجًا مِنْهُمْ وَلَا تَحْزَنْ عَلَيْهِمْ وَاخْفِضْ جَنَاحَكَ لِلْمُؤْمِنِينَ

ನಾವು ಅವರಲ್ಲಿರುವ ನಾನಾ ವಿಧದ ಜನರಿಗೆ ಕೊಟ್ಟಿರುವ ಲೌಕಿಕ ಸುಖಭೋಗಗಳ ಕಡೆಗೆ ನೀವು ಕಣ್ಣೆತ್ತಿಯೂ ನೋಡಬೇಡಿರಿ ಮತ್ತು ಅವರಿಗಾಗಿ ಮರುಗಲೂ ಬೇಡಿರಿ. (ಅವರನ್ನು ಅವರ ಪಾಡಿಗೆ ಬಿಟ್ಟು) ಸತ್ಯವಿಶ್ವಾಸವನ್ನು ಸ್ವೀಕರಿಸುವವರ ಕಡೆಗೆ ಬಾಗಿರಿ.ಅಧ್ಯಾಯ 15: ಅಲ್ ಹಿಜ್ರ್

ಸೂಕ್ತ : 87
وَلَقَدْ آتَيْنَاكَ سَبْعًا مِنَ الْمَثَانِي وَالْقُرْآنَ الْعَظِيمَ

ನಾವು ನಿಮಗೆ ಪದೇ ಪದೇ ಪುನರಾವರ್ತಿಸುವ ಸಪ್ತ ಸೂಕ್ತಗಳನ್ನೂ ದಿವ್ಯ ಕುರ್‍ಆನನ್ನೂ ದಯಪಾಲಿಸಿದ್ದೇವೆ.

ಅಲ್ಲಾಹನು ಹೇಳುತ್ತಾನೆ; ಲೌಕಿಕ ಸಂಪತ್ತುಗಳೆಲ್ಲವುಗಳಿಗಿಂತಲೂ ಮಿಗಿಲಾದ ಒಂದು ವಸ್ತುವನ್ನು ನಾನು ನಿನಗೆ ನೀಡಿರುವೆನು. ಅದವೇ ಸಬ್ಉಲ್ ಮಸಾನೀ. ಅರ್ಥಾತ್ ಪುನರಾವರ್ತಿಸಲ್ಪಡುವ ಒಂದು ಅಧ್ಯಾಯ. ಲೌಕಿಕ ಸಂಪತ್ತು ಗಳೆಲ್ಲವುಗಳಿಂತಲೂ ಮಿಗಿಲಾದ ಈ ಅಧ್ಯಾಯ ವಿಶೇಷತೆ ಏನೆಂದು ನೋಡೋಣ. ಮುನ್ನೂರಕ್ಕೂ ಅಧಿಕ ಪುಟಗಳಲ್ಲಿ ಈ ಏಳು ಸೂಕ್ತಗಳನ್ನು ವಿವರಿಸಿದ ಬಳಿಕ ಇಮಾಮ್ ರಾಝಿ (ರ) ಹೀಗೆಂದರು: ನನ್ನ ಮನಸ್ಸು ಇನ್ನೂ ತೃಪ್ತ ವಾಗಿಲ್ಲ. ಮುನ್ನೂರಕ್ಕೂ ಅಧಿಕ ಪುಟಗಳಲ್ಲಿ ವಿವರಿಸಿದರೂ ವಿವರಣೆ ಇನ್ನೂ ಇದೆ. ಇಷ್ಟೊಂದು ಸವಿಸ್ತಾರ ವಿವರಣೆ ನೀಡಿದರೂ ನಾನು ತೃಪ್ತನಾಗಿಲ್ಲ.

ಫಾತಿಹ ಎಂದರೆ ಪೀಠಿಕೆ ಎಂದರ್ಥ. ಸಂಪೂರ್ಣ ಕುರ್ ಆನ್ ನಲ್ಲಿ ಒಳಗೊಂಡಂತಹ ವಿಚಾರಗಳನ್ನು ಸಂಕ್ಷಿಪ್ತವಾಗಿ ಮತ್ತು ಸಮಗ್ರವಾಗಿ ಈ ಏಳು ಸೂಕ್ತಗಳಲ್ಲಿ ಪರಾಮರ್ಶಿಸಲಾಗಿದೆ.ಒಬ್ಬ ವ್ಯಕ್ತಿಯು ಫಾತಿಹಾದ ಅರ್ಥ ತಾತ್ಪರ್ಯವನ್ನು ಆಳವಾಗಿ ಅರ್ಥಮಾಡಿಕೊಂಡಾಗ ಆತನಿಗೆ ಉಳಿದ 113 ಅಧ್ಯಾಯದಲ್ಲಿ ಏನಿರಬಹುದೆಂದು ಅರ್ಥೈಸಲು ಸಾಧ್ಯವಾಗಬಹುದು . ಈ ಅಧ್ಯಾಯಕ್ಕೆ ಪೀಠಿಕೆ ಎಂಬ ಅರ್ಥ ಬರುವ ಹೆಸರನ್ನು ನೀಡಿರುವುದರ ಯುಕ್ತಿಯು ಇದುವೇ ಆಗಿರುವುದು. ತನ್ನ ಪ್ರಭುವಿನ ಸನ್ನಿಧಿಯಲ್ಲಿ ಮನವಿಯ ರೂಪದಲ್ಲಿ ಮುಂದಿರಿಸಲಿಕ್ಕಾಗಿ ಅಲ್ಲಾಹನೇ ಈ ಅಧ್ಯಾಯವನ್ನು ತನ್ನ ದಾಸರಿಗೆ ಕಲಿಸಿರುವನು. ಇದು ಒಂದು ಪ್ರಾರ್ಥನೆಯಾಗಿದೆ.
ಈ ಸೂಕ್ತವನ್ನು ಪ್ರತಿದಿನ ಮುಸಲ್ಮಾನನು ಹದಿನೇಳು ಬಾರಿ ಪಠಿಸಿದಾಗ ಜೀವನದಲ್ಲಿ ಅದರ ಪ್ರತಿಫಲನ ಖಂಡಿತಾ ಮೂಡಬೇಕಾಗಿದೆ. ಫಾತಿಹಾದ ಅರ್ಥ ತಿಳಿಯದವರು ನಮ್ಮ ಪೈಕಿ ಯಾರೂ ಇರಲಾರರು. ಆದರೆ ಕೇವಲ ಶಬ್ದಾರ್ಥಗಳಿಂದಾಚೆ ಭಾವನಾತ್ಮಕ ಮತ್ತು ಆಧ್ಯಾತ್ಮಿಕತೆಯಿಂದ ಕೂಡಿದ ಅರ್ಥದ ತಿರುಳನ್ನು ಕಲಿಯಲು ಪ್ರಯತ್ನಿಸಿದಾಗ ಈ ಅಧ್ಯಾಯವನ್ನು ನಮಗೆ ಅನುಭವಿಸಲು ಸಾಧ್ಯವಾಗುತ್ತದೆ. ನಾವು ಪಠಿಸುವ ಫಾತಿಹಾ ಒಂದಕ್ಕಿಂತ ಇನ್ನೊಂದು ಇನ್ನೂ ಹೃದಯಸ್ಪರ್ಶಿಯಾಗಿರಬೇಕು. ಇದನ್ನು ಕುರ್ಆನ್ ನ ಎಸ್ಸೆನ್ಸ್ ಅಥವಾ ಎಕ್ಸಾಟ್ಕ್ಷನ್ ಎಂದೂ ಹೇಳಬಹುದು. ಏಕೆಂದರೆ ಮೂವತ್ತು ಖಾಂಡಗಳಲ್ಲಿ ವಿವರಿಸಲಾದ ವಿಷಯಗಳನ್ನು ಸಂಕ್ಷಿಪ್ತವಾಗಿ ಮತ್ತು ಸಮಗ್ರವಾಗಿ ಈ ಏಳು ಸೂಕ್ತಗಳಲ್ಲಿ ಅನಾವರಣ ಗೊಳಿಸಲಾಗಿದೆ. ಇಂತಹ ಸೂಕ್ತಗಳನ್ನು ಪ್ರತಿ ದಿನ ಹದಿನೇಳು ಬಾರಿ ಕಡ್ಡಾಯವಾಗಿ ಪಠಿಸುವಾಗ ನಮ್ಮ ಜೀವನದ ಯಾವೆಲ್ಲಾ ಕ್ಷೇತ್ರಗಳಲ್ಲಿ ಅದು ಸ್ಪರ್ಶಿಸುತ್ತಿದೆ ಮತ್ತು ಸ್ಪರ್ಶಿಸಬೇಕೆಂದು ನಾವು ಸ್ವತಃ ಅವಲೋಕನ ನಡೆಸಬೇಕಾಗಿದೆ. ಪ್ರಸ್ತುತ ಸೂಕ್ತಗಳ ಆಳಕ್ಕೆ ಇಳಿಯಲು ಕೆಲವು ಅಕ್ಷರಗಳಿಂದ ಖಂಡಿತಾ ಅಸಾಧ್ಯ. ಅದಕ್ಕಾಗಿ ಸ್ವತಃ ನಮ್ಮ ಮನಸ್ಸನ್ನು ನಾವೇ ಸಜ್ಜು ಗೊಳಿಸಬೇಕಾಗಿದೆ. ಆಗ ಮಾತ್ರ ನಮಗೆ ಅದು ಅನುಭವವೇದ್ಯವಾಗುತ್ತದೆ. ಇನ್ನು ಈ ಸೂಕ್ತಗಳನ್ನು ಅವತೀರ್ಣ ಗೊಳಿಸಿದ ಜಗದ್ಪಾಲಕನ ನಾಮದ ಬಗ್ಗೆ ಒಂದಿಷ್ಟು ವಿಚಾರಗಳನ್ನು ತಿಳಿಯಲು ಪ್ರಯತ್ನಿಸೋಣ.
(الله. )
ಅಲ್ಲಾಹ್ ಎಂಬ ಶಬ್ದಕ್ಕೆ ಹಲವಾರು ವಿಶೇಷತೆಗಳಿವೆ. ಅಲ್ಲಾಹನಿಗೆ ಹಲವಾರು ಗುಣವಿಶೇಷ ನಾಮಗಳಿವೆ. ಆದರೆ ಅಲ್ಲಾಹ್ ಎಂಬ ಶಬ್ದವು ಇದರಿಂದ ಹೊರತಾದ ಸಂಜ್ಞಾನಾಮವಾಗಿದೆ. ಈ ನಾಮವು ಈ ಕಾಣುವ ಸರ್ವ ವಿಶ್ವವನ್ನೂ ಅದರಲ್ಲಿರುವ ಸರ್ವ ಚರಾಚರಗಳನ್ನು ಸೃಷ್ಟಿಸಿ ಅವುಗಳಿಗೆ ಮಾರ್ಗದರ್ಶನ ಹಾಗೂ ಅನ್ನಾಹಾರವನ್ನು ಸಜ್ಜುಗೊಳಿಸಿದ ಸೃಷ್ಟಿಕರ್ತನು ಸ್ವಯಂ ಸ್ವೀಕರಿಸಿಕೊಂಡಿರುವ ನಾಮ.
ಅರಬಿಕ್ ಅಕ್ಷರ ಮಾಲೆಯಲ್ಲಿ نقط ಅಂದ್ರೆ ಡಾಟ್ ಇದ್ದ ಅಕ್ಷರಗಳು ಇವೆ ನುಕ್ತ್ ಇಲ್ಲದ ಅಕ್ಷರಗಳೂ ಇವೆ. ಆದುದರಿಂದ ಕಲಿಮತುತ್ತೌಹೀದ್ (ಏಕತ್ವ) ನ ಪದಗಳಲ್ಲಿ ಕೇವಲ ನುಕ್ತ ಇಲ್ಲದ ಅಕ್ಷರಗಳನ್ನು ಮಾತ್ರ ಉಪಯೋಗಿಸಲಾಗಿದೆ. ಆದುದರಿಂದ ಅದನ್ನು ಒಬ್ಬ ವ್ಯಕ್ತಿಗೆ ಬರೆಯಬೇಕಿದ್ದರೆ ಅತ್ಯುತ್ತಮ ಮತ್ತು ಬಹಳ ಸರಳವಾಗಿ ಬರೆಯತಕ್ಕಂತಹ ಅಕ್ಷರಗಳು. ಮತ್ತು ಮುಂಚಿನ ಕಾಲದಲ್ಲಿ ಅರಬರು ಅರಬಿಕ್ ಭಾಷೆಯಲ್ಲಿನ 28 ಅಕ್ಷರಗಳನ್ನೂ ನುಕ್ತ ಇಲ್ಲದೆಯೇ ಬರೆಯುತ್ತಿದ್ದರು. ಆದುದರಿಂದ ಆ ದಿನಗಳಲ್ಲಿ ಏಕತ್ವದ ಪದಗಳನ್ನು ಯಾವ ರೀತಿ ಬರೆಯಲಾಗಿತ್ತೋ ಇಂದು ಕೂಡಾ ಅದೇ ರೀತಿ ಇವೆ. ಮತ್ತು ಲೋಕಾಂತ್ಯದ ವರೆಗೂ ಇದು ಸ್ಥಿರವಾಗಿರುವುದು ಎಂಬುದು ಈ ವಾಕ್ಯದ ವಿಶೇಷ ತೆ ಯಾಗಿದೆ.
لاالاه الا الله.
الله.

. (ಅಲ್ಲಾಹ್ ) ಎಂಬ ಶಬ್ದ ಕ್ಕೆ ಒಂದು ರೂಪವನ್ನು ಕೊಟ್ಟದ್ದಾಗಿದೆ ಇಲಾಹ್ (ಇಲಾಹ್) ಎಂಬ ಪದ. ಈ ಪದದ ಸರಿಯಾದ ಉಚ್ಚಾರಣೆ ಆ ಪದದ ಗೌರವವನ್ನು ನಮಗೆ ಅನುಭವಿಸಲು ಸಹಕರರಿಸುತ್ತದೆ. ಅಲ್ಲಾಹ್ ಎಂಬ ಶಬ್ದದ ಸೋನಿಕ್ ಎಫೆಕ್ಟ್ ಅಂದರೆ ಶಬ್ದಗಳು ನಮ್ಮ ಬಾಯಿಯಿಂದ ಹೊರಡುವಾಗ ಶಬ್ದತರಂಗಗಳು ಉಂಟಾಗುತ್ತದೆ. ಈ ಶಬ್ದತರಂಗಗಳು ಮನಸ್ಸನ್ನು ಸ್ವಾಧೀನಿಸುತ್ತದೆ.
ಒಮ್ಮೆ ಪ್ರವಾದಿ ಹೀಗೆಂದರು: ನಾನು ಒಮ್ಮೆ ಒಂದು ವೃಕ್ಷದ ನೆರಳಿನಲ್ಲಿ ನಿದ್ರಿಸುತ್ತಿದ್ದೆ. ನನ್ನ ಕೈಯಲ್ಲಿದ್ದ ಖಡ್ಗವನ್ನು ಮರದಲ್ಲಿ ನೇತು ಹಾಕಿದ್ದೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು ಮುಹಮ್ಮದ್ ಎಂದು ಬಹಳ ಉಚ್ಛ ಸ್ವರದಲ್ಲಿ ಕೂಗಿದ. ಆ ಶಬ್ದ ತರಂಗಗಳು ನನ್ನನ್ನು ನಿದ್ದೆಯಿಂದ ಎಚ್ಚರಿಸಿತು. ಏಕೆಂದರೆ ಅರಬರಲ್ಲಿ ನಿದ್ರಿಸುವವರನ್ನು ವಧಿಸುವುದು ಅವರ ನಾಗರಿಕತೆ ಗೆ ವಿರುದ್ಧ ಮತ್ತು ಹೇಡಿತನವಾಗಿತ್ತು. ಹಾಗೆ ಆ ಕರೆದ ವ್ಯಕ್ತಿ ಪ್ರವಾದಿಯ ಖಡ್ಗವನ್ನು ಎತ್ತಿ ಹಿಡಿದು: ಹೇಳು ಈ ಖಡ್ಗದಿಂದ ನಿನ್ನನ್ನು ರಕ್ಷಿಸುವವರು ಯಾರು ಎಂದು ಕೇಳಿದಾಗ ಅಲ್ಲಾಹ್ ಎಂದು ಉಚ್ಛ ಸ್ವರದಲ್ಲಿ ಉಚ್ಛರಿಸಿದಾಗ ಅದರ ಶಬ್ದ ತರಂಗಗಳು ಆತನ ಮನಸ್ಸನ್ನು ಸ್ವಾದೀನಿಸಿತು ಮತ್ತು ಆ ವ್ಯಕ್ತಿ ನಡುಗ ತೊಡಗಿದ ಮತ್ತು ಆತನರಿಯದೆ ಆತನ ಕೈಯಿಂದ ಖಡ್ಗವು ಜಾರಿಬಿತ್ತು.
ಈ ಮೂಲಕ ತಿಳಿಸುವುದೇನೆಂರೆ ನಾವು ಉಚ್ಛರಿಸುವ ಅಲ್ಲಾಹ್ ಎಂಬ ಶಬ್ದಕ್ಕೆ ಇನ್ನಾದರೂ ಒಂದು ಬದಲಾವಣೆ ಬರಲಿ ಮತ್ತು ಅದರ ಎಲ್ಲಾ ಗೌರವಗಳನ್ನೊಳಗೊಂಡ ಶಬ್ದ ವಾಗಲಿ ಹಾಗೂ ನಮ್ಮನ್ನು ಭಯಪಡಿಸುವವರನ್ನು ನಡುಗಿಸುವಂತಹ ಅಲ್ಲಾಹ್ ಆಗಲಿ. ಇನ್ನೊಮ್ಮೆ ಅರ್ಥ ವರಿತು ಉಚ್ಚರಿಸೋಣ…ಅಲ್ಲಾಹ್.

ರೈಹಾನ್ ವಿ ಕೆ, ಸಚೇರಿಪೇಟೆ