ಹಜ್, ಉಮ್ರಾ ವೀಸಾ: ಸ್ಮಾರ್ಟ್‌ಫೋನ್ ಆಧಾರಿತ ಬಯೋಮೆಟ್ರಿಕ್ ನೋಂದಣಿಗೆ ಚಾಲನೆ ನೀಡಿದ ಸೌದಿ ಅರೇಬಿಯಾ

0
311

ಸನ್ಮಾರ್ಗ ವಾರ್ತೆ

ಸೌದಿ ಅರೇಬಿಯಾ, ಹಜ್ ಮತ್ತು ಉಮ್ರಾ ಯಾತ್ರಿಕರಿಗೆ ನಿಯಮಗಳನ್ನು ಸುಲಭಗೊಳಿಸಿದೆ. ಉಮ್ರಾ ನಿರ್ವಹಿಸ ಬಯಸುವ ಸೌದಿಯೇತರ ರಾಷ್ಟ್ರಗಳ ಮಂದಿಗೆ ಇಮಿಗ್ರೇಷನ್ ಸಹಿತ ವಿವಿಧ ಚಟುವಟಿಕೆಗಳನ್ನು ತಮ್ಮದೇ ರಾಷ್ಟ್ರದಲ್ಲಿ ಪೂರ್ತಿಗೊಳಿಸಲು ಮತ್ತು ಆನ್ಲೈನ್ ಮೂಲಕ ವೀಸಾ ಪಡೆಯಲು ಬೇಕಾದ ಸ್ಮಾರ್ಟ್ ಯೋಜನೆಯನ್ನು ಸೌದಿ ಜಾರಿಗೊಳಿಸಿದೆ.

ಸ್ಮಾರ್ಟ್ ಫೋನಿನಲ್ಲಿ ಇನ್ಸ್ಟಾಲ್ ಮಾಡುವ
ಆ್ಯಪ್‌ನ ಮೂಲಕ ನೀಡಲಾಗುವ ಈ ಸೌಲಭ್ಯವನ್ನು ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ಜಾರಿಗೊಳಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಜಾರಿಗೊಳಿಸುವ ಸಾಧ್ಯತೆ ಇದೆ.

ತೀರ್ಥಯಾತ್ರಿಗಳು ಎಲ್ಲಿರುತ್ತಾರೆ ಎಂಬುದನ್ನು ಊರಲ್ಲಿದ್ದು ಕೊಂಡೆ ಸಂಬಂಧಿಕರಿಗೆ ತಿಳಿಯಬಹುದಾದ ವ್ಯವಸ್ಥೆ ಕೂಡ ಇದಾಗಿದೆ. ಆ್ಯಪ್‌ನ ಮೂಲಕ ನಡೆಯುವ ಈ ಪ್ರಕ್ರಿಯೆಯು ಸೌದಿಅರೇಬಿಯಾದ ಏಮಿಗ್ರೆಷನ್ ಸಿಸ್ಟಮ್‌ನಲ್ಲಿ ದಾಖಲಾಗುತ್ತದೆ. ಹೀಗೆ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ ಆನ್‌ಲೈನ್ ಮೂಲಕ ವೀಸಾವನ್ನು ಪಡೆದು ಸೌದಿಗೆ ತಲುಪಬಹುದಾಗಿದೆ.

ಸಾಮಾನ್ಯವಾಗಿ ಸೌದಿಗೆ ಬರುವವರು ಎಮಿಗ್ರೇಶನ್ ಪ್ರಕ್ರಿಯೆಗಳ ಭಾಗವಾಗಿ ಕಣ್ಣು ಮತ್ತು ಬೆರಳುಗಳ ಗುರುತುಗಳನ್ನು ನೀಡಬೇಕಾಗಿದೆ. ಇದೀಗ ಈ ಆ್ಯಪ್‌ನ ಮೂಲಕ ಈ ಪ್ರಕ್ರಿಯೆಯನ್ನು ಊರಿನಲ್ಲಿಯೇ ಪೂರ್ಣಗೊಳಿಸಬಹುದಾಗಿದೆ.