ಸೂಕ್ತ ಸಮಯದಲ್ಲಿ ಕೃಷಿ ಕಾನೂನು ಜಾರಿಗೆ ಪುನಃ ಯತ್ನಿಸಲಾಗುವುದು: ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

0
504

ಸನ್ಮಾರ್ಗ ವಾರ್ತೆ

ನಾಗಪುರ: ರೈತರ ತೀವ್ರ ವಿರೋಧ ಬಳಿಕ ಹಿಂತೆಗೆದುಕೊಳ್ಳಲಾಗಿರುವ ಕೃಷಿ ಕಾನೂನುಗಳನ್ನು ಸೂಕ್ತ ಸಮಯದಲ್ಲಿ ಪುನಃ ಜಾರಿಗೊಳಿಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.

ಮಹಾರಾಷ್ಟ್ರದ ಒಂದು ಕಾರ್ಯಕ್ರಮದಲ್ಲಿ ಸಚಿವರು ಹೇಳಿಕೆ ನೀಡಿದ್ದು, ನಾವು ಕೃಷಿ ತಿದ್ದುಪಡಿ ಕಾನೂನು ಮಂಡಿಸಿದೆವು. ಆದರೆ ಸ್ವಾತಂತ್ರ್ಯ ಸಿಕ್ಕ ಎಪ್ಪತ್ತು ವರ್ಷದ ಮೇಲೆ ನಾವು ಮಂಡಿಸಿದ ಕ್ರಾಂತಿಕಾರಿಯಾದ ಆ ಕಾನೂನು ತಿದ್ದುಪಡಿ ಕೆಲವರಿಗೆ ಇಷ್ಟವಾಗಲಿಲ್ಲ ಎಂದು ಸಚಿವರು ಹೇಳಿದರು. ಇದರಿಂದ ಸರಕಾರ ನಿರಾಶಗೊಂಡಿಲ್ಲ. ನಾವು ಒಂದು ಹೆಜ್ಜೆ ಹಿಂದೆಟ್ಟಿದ್ದೇವೆ. ಆದರೂ ಪುನಃ ಮುಂದೆ ಬರುತ್ತೇವೆ. ಕಾರಣ ಅದು ಭಾರತದ ಬೆನ್ನೆಲುಬು ಆಗಿದೆ. ಕೃಷಿ ಕಾನೂನುಗಳನ್ನು ಜಾರಿಗೊಳಿಸಲು ಬಿಡದ ರೈತರ ಅಭಿವೃದ್ಧಿಗೆ ಅಡ್ಡಿಯಾಗಿರುವವರನ್ನು ಪಾರ್ಲಿಮೆಂಟಿನಲ್ಲಿಯೂ ಕೃಷಿ ಸಚಿವರು ಟೀಕಿಸಿದ್ದರು. ಈ ಕಾನೂನಿನ ಪ್ರಾಮುಖ್ಯತೆಯ ಕುರಿತು ಮನವರಿಕೆ ಮಾಡಿಕೊಡಲು ಸರಕಾರ ಬಹಳಷ್ಟು ಯತ್ನಿಸಿದೆ ಎಂದು ಸಚಿವರು ಹೇಳಿದ್ದರು.