ಧರ್ಮ ಸಂಸದ್‌ನಲ್ಲಿ ಜನಾಂಗೀಯ ಹತ್ಯೆಗೆ ಕರೆ: ನ್ಯಾಯಾಂಗೀಯ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಸುಪ್ರೀಂ ಕೋರ್ಟಿನ ಹಿರಿಯ 76 ವಕೀಲರಿಂದ ಚೀಫ್ ಜಸ್ಟಿಸ್‍ಗೆ ಪತ್ರ

0
272

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿ ಮತ್ತು ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜನಾಂಗೀಯ ಹತ್ಯೆಗೆ ಕರೆ ನೀಡಿದ ಘಟನೆಯಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಬೇಕೆಂದು ಸುಪ್ರೀಂಕೋರ್ಟಿನ ಹಿರಿಯ 76 ವಕೀಲರು ಚೀಫ್ ಜಸ್ಟಿಸ್‍ಗೆ ಪತ್ರ ಬರೆದಿದ್ದಾರೆ. ವಂಶೀಯ ನಿರ್ಮೂಲನಕ್ಕೆ ಕರೆ ನೀಡಿದ ಜನರ ಹೆಸರು ವಿವರಗಳನ್ನು ಪತ್ರದಲ್ಲಿ ಬರೆದಿದ್ದಾರೆ.

ಈ ಘಟನೆಯಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ತುರ್ತಾಗಿ ನ್ಯಾಯಾಂಗ ಮಧ್ಯಪ್ರವೇಶಿಸಬೇಕೆಂದು ವಕೀಲರು ಆಗ್ರಹಿಸಿದರು. ದಿಲ್ಲಿ, ಹರಿದ್ವಾರದಲ್ಲಿ ನಡೆಸಿದ ಧರ್ಮ ಸಂಸದ್ ಕಾರ್ಯಕ್ರಮದ ಭಾಷಣಗಳಲ್ಲಿ ದ್ವೇಷ ಕಾರಲಾಗಿದೆ. ಒಂದು ಸಮುದಾಯದವನ್ನು ನಿರ್ಮೂಲಿಸಲು ಕರೆ ನೀಡುವುದಕ್ಕೆ ಸಮಾನ ಇದು. ನಮ್ಮ ದೇಶದ ಒಗ್ಗಟ್ಟು, ಅಖಂಡತೆಗೆ ಮಾತ್ರವಲ್ಲ ಲಕ್ಷಾಂತರ ಮುಸ್ಲಿಂ ಪ್ರಜೆಗಳ ಜೀವನಕ್ಕೆ ಇದು ಬೆದರಿಕೆಯಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ದುಷ್ಯಂತ್ ದುಬೆ, ಪ್ರಶಾಂತ್ ಭೂಷಣ್, ವೃಂದ ಗ್ರೋವರ್, ಸಲ್ಮಾನ್ ಖುರ್ಷಿದ್, ಪಟ್ನಾ ಹೈಕೋರ್ಟಿನ ಮಾಜಿ ನ್ಯಾಯಾಧೀಶೆ ಅಂಜನಾ ಪ್ರಕಾಶ್ ಮುಂತಾದ ಪ್ರಮುಖರು ಪತ್ರಕ್ಕೆ ಸಹಿ ಹಾಕಿದ್ದಾರೆ. ಹರಿದ್ವಾರದಲ್ಲಿ ಮುಸ್ಲಿಮರ ಜನಾಂಗೀಯ ಹತ್ಯೆಗೆ ಕರೆ ನೀಡಿದ ಕಾರ್ಯಕ್ರಮ ನಡೆದು ನಾಲ್ಕು ದಿನಗಳ ಬಳಿಕ ಪೊಲೀಸರು ಕೇಸು ದಾಖಲಿಸಲು ಸಿದ್ಧರಾದರು. ದ್ವೇಷಪೂರಿತ ಭಾಷಣದ ನಂತರ ಪ್ರತಿಭಟನೆಗಳು ಎದ್ದು ನಿಂತ ಮೇಲೆ ಪೊಲೀಸರು ಕ್ರಮಕ್ಕೆ ಮುಂದಾದರು. ಮೊದಲ ಒಬ್ಬರ ಹೆಸರಲ್ಲಿ ನಂತರ ಧರ್ಮ ಸಂಸದ್‌ನ ಸಾಧ್ವಿ ಅನ್ನಪೂರ್ಣ ಹೆಸರು ಸೇರಿಸಿದ್ದಾರೆ.

ಮ್ಯಾನ್ಮಾರಿನ ಮಾದರಿಯಲ್ಲಿ ಸೇನೆ, ಪೊಲೀಸರು, ರಾಜಕಾರಿಗಣಿಗಳು ಎಲ್ಲ ಹಿಂದೂಗಳು ಆಯುಧ ಎತ್ತಬೇಕು. 20 ಲಕ್ಷ ಜನರ ಹತ್ಯೆಗೆ ಮುಂದೆ ಬರಬೇಕು ಎಂದು ಸಾಧ್ವಿ ಅನ್ನಪೂರ್ಣ ಭಾಷಣ ನೀಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ .