ಮೋದಿ ಸರಕಾರ ಮುಂದಿನ ಬಲಿ ಪಶುಗಳನ್ನು ಹುಡುಕಿಕೊಂಡಿದೆ; ಅವರು ಕ್ರೈಸ್ತರು: ಪಿ. ಚಿದಂಬರಂ

0
290

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮೋದಿ ಸರಕಾರ ಮುಂದಿನ ಗುರಿ ಕ್ರೈಸ್ತರು ಎಂದು ಕೇಂದ್ರ ಮಾಜಿ ಸಚಿವ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿದರು. ಮೋದಿ ಸರಕಾರ ತಮ್ಮ ಬಹುಸಂಖ್ಯಾತ ಅಜೆಂಡಾ ಮುಂದಿಟ್ಟು ಕ್ರೈಸ್ತರನ್ನು ಗುರಿ ಮಾಡುತ್ತಿದೆ ಎಂದು ಚಿದಂಬರಂ ಹೇಳಿದರು. ಮಿಶನರೀಸ್ ಆಫ್ ಚ್ಯಾರಿಟಿಯ ಎಫ್‍ಸಿಆರ್‍ಎ ನೋಂದಣಿ ನವೀಕರಣಕ್ಕೆ ಅದು ನಿರಾಕರಿಸಿದೆ. ಗೃಹ ಸಚಿವಾಲಯದ ಈ ನಿಲುವನ್ನು ಚಿದಂಬರಂ ರೂಕ್ಷವಾಗಿ ಟೀಕಿಸಿದರು. 2021ರ ಕೊನೆಯಲ್ಲಿ ಒಂದು ವಿಷಯ ಸ್ಪಷ್ಟವಾಯಿತು. ಮೋದಿ ಸರಕಾರ ಅವರ ಮುಂದಿನ ಬಲಿಯನ್ನು ಕಂಡು ಹುಡುಕಿದೆ ಅವರು ಕ್ರೈಸ್ತರು.

ಪ.ಬಂಗಾಳದ ಕೊಲ್ಕತಾದ ಮಿಶನರೀಸ್ ಆಫ್ ಚ್ಯಾರಿಟಿಗೆ ಭವಿಷ್ಯದಲ್ಲಿ ವಿದೇಶಿ ದೇಣಿಗೆ ನಿರಾಕರಿಸಿದ್ದು ಭಾರತದ ಬಡವರಿಗೂ ನಿರ್ಗತರಿಗಾಗಿ ಜೀವನ ಮೀಸಲಿಟ್ಟ ಮದರ್ ತೆರೆಸಾರ ಸ್ಮರಣೆಗೆ ಇರುವ ದೊಡ್ಡ ಅಪಮಾನ ಇದು ಎಂದು ಅವರು ಹೇಳಿದರು.

ಎಫ್‌ಸಿಆರ್‍ಎ ನೋಂದಣಿ ನವೀಕರಿಸಲು ಮಿಶನರೀಸ್ ಆಫ್ ಚ್ಯಾರಿಟಿಯ ಮನವಿಯು ಅರ್ಹತೆಯ ನಿಯಮಗಳನ್ನು ಪಾಲಿಸದ್ದರಿಂದ ಡಿಸೆಂಬರ್ 25ಕ್ಕೆ ಅದನ್ನು ತಿರಸ್ಕರಿಸಲಾಗಿದೆ ಎಂದು ಗೃಹ ಸಚಿವಾಲಯ ಹೇಳಿಕೆ ಹೊರಡಿಸಿತ್ತು. ಇದರ ನಂತರ ಚಿದಂಬರಂ ಟ್ವೀಟ್ ಮಾಡಿದ್ದಾರೆ.1950 ಅಕ್ಟೋಬರಿನಲ್ಲಿ ಮದರ್ ತೆರೆಸಾ ಹತ್ತು ಸದಸ್ಯರ ಮಿಶನರೀಸ್ ಆಫ್ ಚ್ಯಾರಿಟಿ ಆರಂಭಿಸಿದ್ದರು. ಅನಾಥರು, ಕುಷ್ಟರೋಗಿಗಳಾಗಿ ಅದು ಕೆಲಸ ಮಾಡುತ್ತಿದೆ. 71 ವರ್ಷಗಳಿಂದ ಕೆಲಸ ಮಾಡುವ ಸಂಸ್ಥೆಯ ಬಗ್ಗೆ ಗೃಹ ಸಚಿವಾಲಯದ ನಿಲುವು ವಿವಾದಕ್ಕೊಳಗಾಗಿದೆ. ಇದೇ ಸಂದರ್ಭದಲ್ಲಿ ಪೋಪ್‍ರನ್ನು ಪ್ರಧಾನಿ ಭಾರತ ಸಂದರ್ಶನಕ್ಕೆ ಸ್ವಾಗತಿಸಿದ್ದಾರೆ.