ವಾಟ್ಸಪ್ ಗ್ರೂಪ್ ನಲ್ಲಿ ಸದಸ್ಯರು ಹಾಕಿದ ಸಂದೇಶಕ್ಕೆ ಅಡ್ಮಿನ್ ಹೊಣೆ ಅಲ್ಲ : ಮದ್ರಾಸ್ ಹೈಕೋರ್ಟ್ ತೀರ್ಪು

0
272

ಸನ್ಮಾರ್ಗ ವಾರ್ತೆ

ಚೆನ್ನೈ: ವಾಟ್ಸಪ್ ಗುಂಪುಗಳ ಸದಸ್ಯರಿಂದ ಅಪರಾಧಿ ಸ್ವಭಾವದ ಮೆಸೇಜುಗಳು ಬಂದರೆ ಅದಕ್ಕೆ ಗ್ರೂಪ್ ಅಡ್ಮಿನ್ ಆಗಿರುವವರು ಹೊಣೆಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿದೆ. ಇಂತಹ ಪ್ರಕರಣಗಳಲ್ಲಿ ಅಡ್ಮಿನ್ ವಿಚಾರಣೆ ಎದುರಿಸಬೇಕಾಗಿಲ್ಲ ಎಂದು ಮಧುರೆ ಪೀಠ ತೀರ್ಪು ನೀಡಿದೆ. ಕಾರೂರ್ ಲಾಯಸ್ ಎಂಬ ವಾಟ್ಸಪ್ ಗ್ರೂಪ್‍ನಲ್ಲಿ ಅಡ್ಮಿನ್ ಮತ್ತು ಅರ್ಜಿದಾರ ವಕೀಲ ಆರ್. ರಾಜೇಂದ್ರನ್ ಸಲ್ಲಿಸಿದ ಅರ್ಜಿಯಲ್ಲಿ ಈ ತೀರ್ಪು ಬಂದಿದೆ.

ತನ್ನ ವಿರುದ್ಧ ದಾಖಲಾದ ಕೇಸು ರದ್ದುಪಡಿಸಬೇಕೆಂದು ಅವರು ಅರ್ಜಿ ಸಲ್ಲಿಸಿದ್ದರು. ಧಾರ್ಮಿಕ ಸ್ಪರ್ಧೆ ಉಂಟು ಮಾಡುವ ರೀತಿಯಲ್ಲಿ ಪಚ್ಚೆಯಪ್ಪನ್ ಎಂಬಾತ ಪೋಸ್ಟ್ ಹಾಕಿದ್ದ. ಇದೇ ಗ್ರೂಪ್‍ನ ಇನ್ನೊಬ್ಬ ವಕೀಲರು ದೂರು ನೀಡಿದ್ದರು. ನಂತರ ಗ್ರೂಪ್ ಅಡ್ಮಿನ್ ಮತ್ತು ಪಚ್ಚೆಯಪ್ಪನ್ ವಿರುದ್ಧ ಕಾರೂರ್ ಪೊಲೀಸರು ಕೇಸು ಹಾಕಿದ್ದರು.

ನನಗೆ ಗ್ರೂಪ್ ಎಡ್ಮಿನಿಸ್ಟ್ರೇಟರ್ ಎಂಬ ಸ್ಥಾನ ಮಾತ್ರ ಇರುವುದು ಎಂದು ರಾಜೇಂದ್ರನ್ ವಾದಿಸಿದ್ದರು. ತನಗೂ ಘಟನೆಗೂ ಸಂಬಂಧ ಇಲ್ಲ ಎಂದು ಅವರು ಹೇಳೀದರು. ನಂತರ ಇದೇ ವರ್ಷ ಬಾಂಬೆ ಹೈಕೋರ್ಟಿನ ಆದೇಶ ಉದ್ದರಿಸಿ ಮದ್ರಾಸ್ ಹೈಕೋರ್ಟು ತೀರ್ಪು ನೀಡಿತು. ಇದೇ ವೇಳೆ ರಾಜೇಂದ್ರನ್‍ರ ಬಗ್ಗೆ ಬೇರೆ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರಿಗೆ ಸಾಧ್ಯವಾದರೆ ಇವರನ್ನು ಸೇರಿಸಿ ಕೇಸು ಹಾಕಬಹುದು ಎಂದೂ ಕೋರ್ಟು ತೀರ್ಪಿನಲ್ಲಿ ತಿಳಿಸಿತು.

ಪೊಲೀಸರು 2020ರಲ್ಲಿ ಪಚ್ಚೆಯಪ್ಪನ್ ಮತ್ತು ರಾಜೇಂದ್ರನ್ ವಿರುದ್ಧ ಪೊಲೀಸರು ಕೇಸು ಹಾಕಿದ್ದರು. ಪಚ್ಚೆಯಪ್ಪನನ್ನು ಮೊದಲು ಗ್ರೂಪ್‍ನಿಂದ ಹೊರಗೆ ಹಾಕಲಾಗಿತ್ತು ನಂತರ ಸೇರಿಸಿಕೊಳ್ಳಲಾಗಿತ್ತು. ಪಚ್ಚೆಯಪ್ಪನ್ ಮತ್ತು ರಾಜೇಂದ್ರನ್ ಸಂಚು ಹೆಣೆದಿದ್ದರು ಎಂದು ಗ್ರೂಪಿನ ವಿರುದ್ಧ ದೂರು ನೀಡಿದ್ದ ವಕೀಲರು ದೂರಿನಲ್ಲಿ ಆರೋಪಿಸಿದ್ದರು.